alex Certify ಜಮೀನಿನಲ್ಲೇ ಬೆಚ್ಚಿ ಬೀಳಿಸುವ ಘಟನೆ, ಪತಿಯಿಂದಲೇ ಪತ್ನಿ ಬರ್ಬರ ಹತ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಜಮೀನಿನಲ್ಲೇ ಬೆಚ್ಚಿ ಬೀಳಿಸುವ ಘಟನೆ, ಪತಿಯಿಂದಲೇ ಪತ್ನಿ ಬರ್ಬರ ಹತ್ಯೆ

ಬೆಳಗಾವಿ: ಪತ್ನಿಯನ್ನು ಬರ್ಬರವಾಗಿ ಹತ್ಯೆ ಮಾಡಿ ಪತಿ ಪೊಲೀಸ್ ಠಾಣೆಗೆ ಶರಣಾಗಿದ್ದಾನೆ. ಕೊದನಾಪುರ ಹೊರವಲಯದಲ್ಲಿ ರುದ್ರವ್ವ ಅಡಕಿ(55) ಅವರನ್ನು ಹತ್ಯೆ ಮಾಡಲಾಗಿದೆ.

ಬೆಳಗಾವಿ ಜಿಲ್ಲೆ ಕಿತ್ತೂರು ತಾಲೂಕಿನ ಕೊದನಾಪುರ ಗ್ರಾಮದಲ್ಲಿ ಘಟನೆ ನಡೆದಿದೆ. ಪತ್ನಿ ಹತ್ಯೆ ಮಾಡಿ ಪತಿ ಚನ್ನಬಸಪ್ಪ ಅಡಕಿ ಪೊಲೀಸರಿಗೆ ಶರಣಾಗಿದ್ದಾನೆ. ಸಂಗಪ್ಪ ಬೈಲಹೊಂಗಲ ತಾಲೂಕಿನ ಬುಡರಕಟ್ಟಿ ನಿವಾಸಿಯಾಗಿದ್ದು, ಕೌಟುಂಬಿಕ ಕಲಹದಿಂದ ಬೇಸತ್ತು ಪತ್ನಿ ತವರು ಸೇರಿದ್ದರು. ಸಂಗಪ್ಪನೂ ಅಲ್ಲೇ ಬಂದು ನೆಲೆಸಿದ್ದ. ಮನೆಯಲ್ಲಿ ರುದ್ರವ್ವ ಮತ್ತು ಸಂಗಪ್ಪ ಜಗಳವಾಡಿದ್ದು, ಜಮೀನಿಗೆ ಹೋದಾಗ ಮಾರಕಾಸ್ತ್ರದಿಂದ ಥಳಿಸಿ ಪತ್ನಿ ಹತ್ಯೆ ಮಾಡಿದ್ದಾನೆ. ನಂತರ ದೊಡವಾಡ ಠಾಣೆ ಪೊಲೀಸರಿಗೆ ಶರಣಾಗಿದ್ದಾನೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...