ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಗುತ್ತಿಗೆ ಆಧಾರದ ಮೇಲೆ ಟ್ರೇನಿ ಹಾಗೂ ಪ್ರಾಜೆಕ್ಟ್ ಇಂಜಿನಿಯರ್ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಿದೆ. ಆಗ್ರಾ ಸ್ಮಾರ್ಟ್ ಹೆಲ್ಪ್ ಡೆಸ್ಕ್ ಹಾಗೂ ಸ್ಮಾರ್ಟ್ಸ್ ಸಿಟಿ ಬ್ಯುಸಿನೆಸ್ ಎಸ್ಬಿಯು, ಬೆಂಗಳೂರು ಸಂಕೀರ್ಣದಲ್ಲಿ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದಾಗಿದೆ.
bel-india.in ಅಧಿಕೃತ ವೆಬ್ಸೈಟ್ನಲ್ಲಿ ಆಸಕ್ತರು ಅರ್ಜಿ ಸಲ್ಲಿಸಬಹುದಾಗಿದೆ. ಈ ಹುದ್ದೆಗೆ ಅರ್ಜಿ ಸಲ್ಲಿಸಲು ಸೆಪ್ಟೆಂಬರ್ 8 ಕೊನೆಯ ದಿನಾಂಕವಾಗಿದೆ.
ಟ್ರೇನಿ ಇಂಜಿನಿಯರ್ 1 : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಾನಿಕ್ಸ್ / ಎಲೆಕ್ಟ್ರಾನಿಕ್ಸ್ & ಕಮ್ಯೂನಿಕೇಷನ್ಸ್, ಎಲೆಕ್ಟ್ರಾನಿಕ್ಸ್ & ಟೆಲಿಕಮ್ಯೂನಿಕೇಷನ್ಸ್/ ಕಮ್ಯೂನಿಕೇಷನ್ಸ್ & ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿಇ/ ಬಿ.ಟೆಕ್ ಪದವಿಯನ್ನು ಹೊಂದಿರಬೇಕು.
ಪ್ರಾಜೆಕ್ಟ್ ಇಂಜಿನಿಯರ್ 1 : ಅಭ್ಯರ್ಥಿಗಳು ಮಾನ್ಯತೆ ಪಡೆದ ವಿಶ್ವವಿದ್ಯಾಲಯದಲ್ಲಿ ಎಲೆಕ್ಟ್ರಿಕಲ್/ ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಬಿಇ/ಬಿ ಟೆಕ್ ಪದವಿಯನ್ನು ಪಡೆದಿರಬೇಕು.
ಟ್ರೇನಿ ಇಂಜಿನಿಯರ್ 1 : ಮೊದಲನೇ ವರ್ಷ 25 ಸಾವಿರ ರೂಪಾಯಿ, ಎರಡನೇ ವರ್ಷ 28 ಸಾವಿರ ರೂಪಾಯಿ ಹಾಗೂ ಮೂರನೇ ವರ್ಷ 31 ಸಾವಿರ ರೂಪಾಯಿ ವೇತನ ಸಿಗಲಿದೆ.
ಪ್ರಾಜೆಕ್ಟ್ ಇಂಜಿನಿಯರ್ 1 : ಮೊದಲನೇ ವರ್ಷ 35 ಸಾವಿರ ರೂಪಾಯಿ, ಎರಡನೇ ವರ್ಷ ಪ್ರತಿ 40 ಸಾವಿರ ರೂಪಾಯಿ ಹಾಗೂ ಮೂರನೇ ವರ್ಷ ಪ್ರತಿ ತಿಂಗಳು 50 ಸಾವಿರ ರೂಪಾಯಿ ವೇತನ ಸಿಗಲಿದೆ.