alex Certify ಅಶ್ಲೀಲ ವಿಡಿಯೋ ಚಿತ್ರಣ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಮಾಜಿ ಮಿಸ್​ ಇಂಡಿಯಾ ಯೂನಿವರ್ಸ್ ಸ್ಪರ್ಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಶ್ಲೀಲ ವಿಡಿಯೋ ಚಿತ್ರಣ ಕುರಿತು ಶಾಕಿಂಗ್‌ ಸಂಗತಿ ಬಿಚ್ಚಿಟ್ಟ ಮಾಜಿ ಮಿಸ್​ ಇಂಡಿಯಾ ಯೂನಿವರ್ಸ್ ಸ್ಪರ್ಧಿ

ಮುಗ್ದ ಯುವತಿಯರನ್ನು ಪುಸಲಾಯಿಸಿ ಬಳಿಕ ಟ್ರ್ಯಾಪ್​ ಮಾಡಿ ಅವರಿಂದ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸುವ ಗ್ಯಾಂಗ್​ ಮುಂಬೈನಲ್ಲಿದೆ ಎಂದು 2019ನೇ ಸಾಲಿನ ಮಿಸ್​ ಇಂಡಿಯಾ ಯೂನಿವರ್ಸ್​ ​​ಪರಿ ಪಾಸ್ವಾನ್​​ ಗಂಭೀರ ಆರೋಪ ಮಾಡಿದ್ದಾರೆ.

ರಾಜ್​ ಕುಂದ್ರಾ ಅಶ್ಲೀಲ ಪ್ರಕರಣದಲ್ಲಿ ಪರಿ ಪಾಸ್ವಾನ್​ ಕೈವಾಡ ಕೂಡ ಇದೆ ಎಂದು ಆಕೆಯ ಅತ್ತೆ – ಮಾವ ಆರೋಪ ಮಾಡಿರುವ ಬೆನ್ನಲ್ಲೇ ಪರಿ ಪ್ರೊಡಕ್ಷನ್​ ಹೌಸ್​ ವಿರುದ್ಧ ದೂರು ದಾಖಲಿಸಿದ್ದಾರೆ. ಅಮಲು ನೀಡುವ ಪಾನೀಯವನ್ನು ಕುಡಿಸಿದ ಬಳಿಕ ತಮ್ಮ ಕೈಯಲ್ಲಿ ಪೋರ್ನ್​ ವಿಡಿಯೋ ಮಾಡಿಸಿಕೊಳ್ಳಲಾಗಿದೆ ಎಂದು ಈಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ಪರಿ, ನಾನು ಪ್ರಜ್ಞಾವಸ್ಥೆಗೆ ಮರಳಿದ ಬಳಿಕ ಇಲ್ಲಿ ಏನು ನಡೆದಿದೆ ಅನ್ನೋದು ನನ್ನ ಗಮನಕ್ಕೆ ಬಂದಿತ್ತು. ನಾನು ಕೂಡಲೇ ಪೊಲೀಸ್​ ಠಾಣೆ ದೌಡಾಯಿಸಿದೆ. ಹಾಗೂ ಪ್ರೊಡಕ್ಷನ್​ ಹೌಸ್​ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ. ಪರಿ ಪ್ರೊಡಕ್ಷನ್​ ಹೌಸ್​​ನ ಹೆಸರನ್ನು ಬಹಿರಂಗ ಮಾಡಿಲ್ಲ.

ನನಗೆ ತಂಪು ಪಾನೀಯದಲ್ಲಿ ಡ್ರಗ್​ ಬೆರೆಸಿ ನೀಡಲಾಗಿತ್ತು. ಬಳಿಕ ನಾನು ಅರೆಪ್ರಜ್ಞಾವಸ್ಥೆಯಲ್ಲಿ ಇದ್ದ ವೇಳೆ ನನ್ನ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ. ನನಗೆ ಈ ಬಗ್ಗೆ ತಿಳಿಯುತ್ತಿದ್ದಂತೆಯೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಇದು ಮುಂಬೈನಲ್ಲಿರುವ ಗ್ಯಾಂಗ್​ ಆಗಿದ್ದು ಇದೇ ರೀತಿ ಅನೇಕ ಯುವತಿಯರನ್ನು ಮೋಸದ ಜಾಲಕ್ಕೆ ತಳ್ಳಿದೆ. ನಾನು ಕೂಡ ಇದರ ಸಂತ್ರಸ್ತೆಯಾಗಿದ್ದೇನೆ ಎಂದು ಹೇಳಿದ್ದಾರೆ.

ಅತ್ತೆ – ಮಾವ ಮಾಡಿರುವ ಆರೋಪಗಳ ವಿಚಾರವಾಗಿಯೂ ಮಾತನಾಡಿದ ಪರಿ, ನಾನು ಈಗಾಗಲೇ ನನ್ನ ಪತಿ ನೀರಜ್​ ಪಾಸ್ವಾನ್​ ವಿರುದ್ಧ ವರದಕ್ಷಿಣೆ ಕಿರುಕುಳ ದೂರನ್ನು ದಾಖಲಿಸಿದ್ದೇನೆ. ನಾನು ಪ್ರಜ್ಞಾಹೀನಳಾಗಿದ್ದಾಗ ನನ್ನ ಕೈನಿಂದ ಈ ರೀತಿಯ ಅಶ್ಲೀಲ ವಿಡಿಯೋ ಮಾಡಿಸಿಕೊಂಡಿದ್ದಾರೆ. ನನ್ನ ಅತ್ತೆ – ಮಾವ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...