ಮುಗ್ದ ಯುವತಿಯರನ್ನು ಪುಸಲಾಯಿಸಿ ಬಳಿಕ ಟ್ರ್ಯಾಪ್ ಮಾಡಿ ಅವರಿಂದ ಅಶ್ಲೀಲ ವಿಡಿಯೋವನ್ನು ಚಿತ್ರೀಕರಿಸುವ ಗ್ಯಾಂಗ್ ಮುಂಬೈನಲ್ಲಿದೆ ಎಂದು 2019ನೇ ಸಾಲಿನ ಮಿಸ್ ಇಂಡಿಯಾ ಯೂನಿವರ್ಸ್ ಪರಿ ಪಾಸ್ವಾನ್ ಗಂಭೀರ ಆರೋಪ ಮಾಡಿದ್ದಾರೆ.
ರಾಜ್ ಕುಂದ್ರಾ ಅಶ್ಲೀಲ ಪ್ರಕರಣದಲ್ಲಿ ಪರಿ ಪಾಸ್ವಾನ್ ಕೈವಾಡ ಕೂಡ ಇದೆ ಎಂದು ಆಕೆಯ ಅತ್ತೆ – ಮಾವ ಆರೋಪ ಮಾಡಿರುವ ಬೆನ್ನಲ್ಲೇ ಪರಿ ಪ್ರೊಡಕ್ಷನ್ ಹೌಸ್ ವಿರುದ್ಧ ದೂರು ದಾಖಲಿಸಿದ್ದಾರೆ. ಅಮಲು ನೀಡುವ ಪಾನೀಯವನ್ನು ಕುಡಿಸಿದ ಬಳಿಕ ತಮ್ಮ ಕೈಯಲ್ಲಿ ಪೋರ್ನ್ ವಿಡಿಯೋ ಮಾಡಿಸಿಕೊಳ್ಳಲಾಗಿದೆ ಎಂದು ಈಕೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಸಂದರ್ಶನವೊಂದರಲ್ಲಿ ಈ ವಿಚಾರವಾಗಿ ಮಾತನಾಡಿದ ಪರಿ, ನಾನು ಪ್ರಜ್ಞಾವಸ್ಥೆಗೆ ಮರಳಿದ ಬಳಿಕ ಇಲ್ಲಿ ಏನು ನಡೆದಿದೆ ಅನ್ನೋದು ನನ್ನ ಗಮನಕ್ಕೆ ಬಂದಿತ್ತು. ನಾನು ಕೂಡಲೇ ಪೊಲೀಸ್ ಠಾಣೆ ದೌಡಾಯಿಸಿದೆ. ಹಾಗೂ ಪ್ರೊಡಕ್ಷನ್ ಹೌಸ್ ವಿರುದ್ಧ ದೂರು ದಾಖಲಿಸಿದ್ದೇನೆ ಎಂದು ಹೇಳಿದ್ದಾರೆ. ಪರಿ ಪ್ರೊಡಕ್ಷನ್ ಹೌಸ್ನ ಹೆಸರನ್ನು ಬಹಿರಂಗ ಮಾಡಿಲ್ಲ.
ನನಗೆ ತಂಪು ಪಾನೀಯದಲ್ಲಿ ಡ್ರಗ್ ಬೆರೆಸಿ ನೀಡಲಾಗಿತ್ತು. ಬಳಿಕ ನಾನು ಅರೆಪ್ರಜ್ಞಾವಸ್ಥೆಯಲ್ಲಿ ಇದ್ದ ವೇಳೆ ನನ್ನ ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿದ್ದಾರೆ. ನನಗೆ ಈ ಬಗ್ಗೆ ತಿಳಿಯುತ್ತಿದ್ದಂತೆಯೇ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಇದು ಮುಂಬೈನಲ್ಲಿರುವ ಗ್ಯಾಂಗ್ ಆಗಿದ್ದು ಇದೇ ರೀತಿ ಅನೇಕ ಯುವತಿಯರನ್ನು ಮೋಸದ ಜಾಲಕ್ಕೆ ತಳ್ಳಿದೆ. ನಾನು ಕೂಡ ಇದರ ಸಂತ್ರಸ್ತೆಯಾಗಿದ್ದೇನೆ ಎಂದು ಹೇಳಿದ್ದಾರೆ.
ಅತ್ತೆ – ಮಾವ ಮಾಡಿರುವ ಆರೋಪಗಳ ವಿಚಾರವಾಗಿಯೂ ಮಾತನಾಡಿದ ಪರಿ, ನಾನು ಈಗಾಗಲೇ ನನ್ನ ಪತಿ ನೀರಜ್ ಪಾಸ್ವಾನ್ ವಿರುದ್ಧ ವರದಕ್ಷಿಣೆ ಕಿರುಕುಳ ದೂರನ್ನು ದಾಖಲಿಸಿದ್ದೇನೆ. ನಾನು ಪ್ರಜ್ಞಾಹೀನಳಾಗಿದ್ದಾಗ ನನ್ನ ಕೈನಿಂದ ಈ ರೀತಿಯ ಅಶ್ಲೀಲ ವಿಡಿಯೋ ಮಾಡಿಸಿಕೊಂಡಿದ್ದಾರೆ. ನನ್ನ ಅತ್ತೆ – ಮಾವ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಹೇಳಿದ್ರು.