
ಬಾಗಲಕೋಟೆ: ನಗರದ ಬೇಕರಿಯೊಂದರಲ್ಲಿ ಯುವತಿಯರೊಂದಿಗೆ ಉಪಾಹಾರ ಸೇವಿಸಲು ತೆರಳಿದ್ದ ಯುವಕರ ಮೇಲೆ ಹಲ್ಲೆ ನಡೆಸಿದ ಘಟನೆ ನಡೆದಿದೆ.
ಬಾಗಲಕೋಟೆಯ ಬೇಕರಿಯೊಂದರಲ್ಲಿ ಸೋಮವಾರ ರಾತ್ರಿ ಮುಸ್ಲಿಂ ಯುವತಿಯರೊಂದಿಗೆ ಉಪಹಾರ ಸೇವಿಸುತ್ತಿದ್ದ ಇಬ್ಬರು ಯುವಕರ ಮೇಲೆ ಹಲ್ಲೆ ನಡೆಸಿದ್ದು, ಇದು ನೈತಿಕ ಪೊಲೀಸ್ ಗಿರಿ ಘಟನೆಯಂತಿದೆ. ಹಿಂದೂ ಧರ್ಮಕ್ಕೆ ಸೇರಿದ ಇಬ್ಬರು ಯುವಕರು ಮುಸ್ಲಿಂ ಸ್ನೇಹಿತೆಯರೊಂದಿಗೆ ಬೇಕರಿಗೆ ತೆರಳಿ ಉಪಹಾರ ಸೇವಿಸುವಾಗ 15 ಮುಸ್ಲಿಂ ಯುವಕರ ಗುಂಪು ದಿಢೀರ್ ಬೇಕರಿಗೆ ನುಗ್ಗಿ ಹಲ್ಲೆ ಮಾಡಿದೆ ಎಂದು ಹೇಳಲಾಗಿದೆ.