alex Certify ಪ್ರಧಾನಿ ಮೋದಿ ಜೊತೆಗಿನ ಅಪರೂಪದ ಫೋಟೋ ಶೇರ್‌ ಮಾಡಿದ ಡಿಸ್ಕವರಿ ಚಾನೆಲ್‌ ನಿರೂಪಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರಧಾನಿ ಮೋದಿ ಜೊತೆಗಿನ ಅಪರೂಪದ ಫೋಟೋ ಶೇರ್‌ ಮಾಡಿದ ಡಿಸ್ಕವರಿ ಚಾನೆಲ್‌ ನಿರೂಪಕ

ನವದೆಹಲಿ: ‘ಮ್ಯಾನ್ ವರ್ಸಸ್ ವೈಲ್ಡ್’ ಎಂಬ ಜನಪ್ರಿಯ ಟಿವಿ ಕಾರ್ಯಕ್ರಮದ ನಿರೂಪಕ ಬೇರ್ ಗ್ರಿಲ್ಸ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇರುವ ಫೋಟೋ ಶೇರ್‌ ಮಾಡಿಕೊಂಡಿದ್ದು ಅದೀಗ ವೈರಲ್‌ ಆಗಿದೆ.

ಈ ಚಿತ್ರವು ಆಗಸ್ಟ್ 2019 ರಲ್ಲಿ ತೆಗೆದದ್ದಾಗಿದೆ. ಆಗಸ್ಟ್ 2019 ರಲ್ಲಿ, ಪ್ರಧಾನಿ ಮೋದಿ ಡಿಸ್ಕವರಿ ಚಾನೆಲ್‌ನ ʼಮ್ಯಾನ್ Vs ವೈಲ್ಡ್ ವಿತ್ ಬೇರ್ ಗ್ರಿಲ್ಸ್ʼ ಸಂಚಿಕೆಯಲ್ಲಿ ಕಾಣಿಸಿಕೊಂಡಿದ್ದರು. ಆಗ ತೆಗೆದಿರುವ ಫೋಟೋ ಇದಾಗಿದೆ.

ಟ್ವಿಟರ್‌ನಲ್ಲಿ ಈ ಫೋಟೋ ಶೇರ್‌ ಮಾಡಿಕೊಂಡಿದ್ದು, ಉತ್ತರಾಖಂಡದ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನದಲ್ಲಿ ಚಿತ್ರೀಕರಿಸಿದ ಕಾರ್ಯಕ್ರಮದ ಫೋಟೋ ಎಂದಯ ಹೇಳಿದ್ದಾರೆ.

“ಭಾರತದ ಪ್ರಧಾನ ಮಂತ್ರಿಯೊಂದಿಗೆ ಮಳೆಕಾಡಿನಲ್ಲಿನ ಸಾಹಸದ ನೆನಪು ಇದು ! ನನಗೆ ತಿಳಿದಿರುವ ಎರಡು ವಿಷಯಗಳು: ಕಾಡು ಯಾವಾಗಲೂ ಮಹಾನ್ ಆಗಿರುತ್ತದೆ ಮತ್ತು ನನ್ನ ತೆಪ್ಪವು ಖಂಡಿತವಾಗಿಯೂ ಸೋರಿಕೆಯಾಗುತ್ತಿತ್ತು” ಎಂದು ಅವರು ಬರೆದುಕೊಂಡಿದ್ದಾರೆ.

ನೀಲಿ ಪ್ಲಾಸ್ಟಿಕ್ ಶೀಟ್‌ನಿಂದ ಮುಚ್ಚಿದ ಸಣ್ಣ ದೋಣಿಯಲ್ಲಿ ಪ್ರಧಾನಿ ಮೋದಿ ಕುಳಿತಿದ್ದಾರೆ. ಇಬ್ಬರೂ ಸಂಭಾಷಣೆಯಲ್ಲಿ ತೊಡಗಿರುವುದನ್ನು ಕಾಣಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...