ಮಕ್ಕಳನ್ನು ಬೆಳೆಸುವುದು ಸುಲಭವಲ್ಲ. ತಂದೆ-ತಾಯಿ ಇಬ್ಬರೂ ಉದ್ಯೋಗದಲ್ಲಿದ್ದರೆ ಮಕ್ಕಳನ್ನು ಬೆಳೆಸುವುದು ಮತ್ತಷ್ಟು ಕಠಿಣ. ಮಕ್ಕಳನ್ನು ಶಿಸ್ತಿನಿಂದಿರಿಸಲು ಹಾಗೂ ಅವ್ರನ್ನು ಸುಧಾರಿಸಲು ಪಾಲಕರು ಹೇಳುವ ಕೆಲ ಮಾತುಗಳು ಅವ್ರ ಕೋಮಲ ಮನಸ್ಸಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹಾಗಾಗಿ ಮಕ್ಕಳ ಮುಂದೆ ಅಪ್ಪಿತಪ್ಪಿಯೂ ಕೆಲ ಮಾತುಗಳನ್ನು ಆಡಬಾರದು.
ಮಕ್ಕಳು ವಿದ್ಯಾಭ್ಯಾಸದಲ್ಲಿ ಹಿಂದಿದ್ದು, ಕಡಿಮೆ ಅಂಕ ತರುತ್ತಿದ್ದರೆ, ಅವ್ರನ್ನು ಸಮಾಧಾನ ಮಾಡಲು, ನಾನು ಕೂಡ ವಿದ್ಯಾಭ್ಯಾಸದಲ್ಲಿ ಹಿಂದಿದ್ದೆ. ಕಡಿಮೆ ಅಂಕ ಬೀಳುತ್ತಿತ್ತು ಎನ್ನಬೇಡಿ. ಇದು ಮಕ್ಕಳ ವಿದ್ಯಾಭ್ಯಾಸದ ಆಸಕ್ತಿಯನ್ನು ಇನ್ನಷ್ಟು ಕಡಿಮೆ ಮಾಡುತ್ತದೆ. ಹೆಚ್ಚೆಚ್ಚು ಓದಲು, ಅಂಕ ಗಳಿಸಲು ಮಕ್ಕಳ ಮೇಲೆ ಒತ್ತಡ ಹೇರಬೇಡಿ. ಆದ್ರೆ ಇಂಥ ಮಾತುಗಳನ್ನೂ ಆಡಬೇಡಿ. ಅವ್ರನ್ನು ಪ್ರೋತ್ಸಾಹಿಸಿ.
ಸಾಮಾನ್ಯವಾಗಿ ಮನೆಯಲ್ಲಿ ತಂದೆಯನ್ನು ಶಿಸ್ತುಬದ್ಧ ವ್ಯಕ್ತಿಯಂತೆ ಬಿಂಬಿಸಲಾಗುತ್ತದೆ. ತಂದೆಗೆ ಹೇಳ್ತೆನೆ ಎಂದು ಪದೇ ಪದೇ ತಂದೆ ಹೆಸರು ಹೇಳಿ ಮಕ್ಕಳಿಗೆ ಭಯ ಹುಟ್ಟಿಸಲಾಗುತ್ತದೆ. ಇದು ಮಕ್ಕಳ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ. ಮಕ್ಕಳು ತಂದೆಯನ್ನು ಪ್ರೀತಿ, ಸ್ನೇಹದಿಂದ ನೋಡುವ ಬದಲು ದ್ವೇಷಿಸಲು ಶುರು ಮಾಡ್ತಾರೆ.
ಮಕ್ಕಳನ್ನು ಪದೇ ಪದೇ ದೂಷಿಸುವುದು ಸರಿಯಲ್ಲ. ಒಂದೇ ವಿಷ್ಯವನ್ನು ಪದೇ ಪದೇ ಹೇಳಿ, ಮಕ್ಕಳಿಗೆ ಬೈದ್ರೆ ಮಕ್ಕಳು ಕೋಪಗೊಳ್ತಾರೆ. ಮತ್ತಷ್ಟು ಮೊಂಡುತನ ಪ್ರದರ್ಶಿಸುತ್ತಾರೆ.
ನಮ್ಮ ಮಕ್ಕಳನ್ನು ಬಹುತೇಕ ಬಾರಿ ಬೇರೆಯವರಿಗೆ ಹೋಲಿಕೆ ಮಾಡ್ತೇವೆ. ನಿಮಗಿಂತ ಆ ಮಗು ಸುಂದರವಾಗಿ, ಚುರುಕಾಗಿದೆ, ಬುದ್ಧಿವಂತ ಹೀಗೆ ಬೇರೆ ಮಕ್ಕಳನ್ನು ನಿಮ್ಮ ಮಕ್ಕಳ ಮುಂದೆ ಹೊಗಳಬೇಡಿ.
ತೂಕ ಇಳಿಸಿಕೊಳ್ಳುವ ಪ್ರಯತ್ನದಲ್ಲಿ ನೀವಿದ್ದು, ಡಯಟ್ ನಲ್ಲಿದ್ದರೆ ಅದನ್ನು ಮಕ್ಕಳ ಮುಂದೆ ಹೇಳಬೇಡಿ. ಮಕ್ಕಳು ಕೂಡ ಡಯಟ್ ಶುರು ಮಾಡಿದ್ರೆ ಅವ್ರ ಬೆಳವಣಿಗೆ ಕಷ್ಟವಾಗುತ್ತದೆ.