ಮಗುವೊಂದು ಮನೆಗೆ ಬರ್ತಾ ಇದೆ ಅಂದರೆ ನೀವು ಸಾಕಷ್ಟು ತಯಾರಿ ಮಾಡಿಕೊಳ್ಳುತ್ತೀರಿ. ಮನೆಗೊಂದು ನಾಯಿಮರಿ, ಬೆಕ್ಕು ಏನೇ ಇರಲಿ ಅವು ಬರುವುದಕ್ಕಿಂತ ಮುನ್ನವೂ ಕೆಲವೊಂದಿಷ್ಟು ತಯಾರಿ ಮಾಡಿಕೊಳ್ಳಬೇಕು.
ಮುದ್ದು ಮುದ್ದಾದ ನಾಯಿ ಮರಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ. ನಿಯತ್ತಿನ ಪ್ರಾಣಿ ಎಂದೇ ಹೆಸರಾಗಿರುವ ಈ ನಾಯಿ, ಮನೆಯ ಸದಸ್ಯನಾಗಿ ಬಿಡುತ್ತದೆ. ಆದರೆ ಮನೆಗೆ ಈ ಸದಸ್ಯ ಬರುವ ಮುನ್ನ ನೀವು ಕೆಳಗೆ ಹೇಳಿದ್ದನ್ನು ಮಾಡಿಕೊಳ್ಳಬೇಕು.
ನಾಯಿಗೂ ಸಾಕಷ್ಟು ಖರ್ಚಾಗುತ್ತದೆ. ಅದರ ಆಹಾರ, ಶಾಂಪೋ, ವೈದ್ಯಕೀಯ ಖರ್ಚಿನ ಬಗ್ಗೆ ಮನೆಯ ಸದಸ್ಯರ ಜೊತೆ ಚರ್ಚೆ ನಡೆಸಿ. ನಿಮ್ಮ ಬಜೆಟ್ ಅಷ್ಟಿದೆ ಎಂದಾದರೆ ಮಾತ್ರ ನಾಯಿ ಮರಿಯನ್ನು ಮನೆಗೆ ತನ್ನಿ.
ನಾಯಿಯ ವರ್ತನೆ ಬಗ್ಗೆ ಮಾಹಿತಿ ಪಡೆದಿಟ್ಟುಕೊಳ್ಳಿ.
ಮನೆಗೆ ಬಂದ ಆರಂಭದಲ್ಲಿ ಅನಾರೋಗ್ಯ ಕಾಡಬಹುದು. ಹಾಗಾಗಿ ಪಶುವೈದ್ಯರು ಎಲ್ಲಿದ್ದಾರೆಂಬುದನ್ನು ತಿಳಿದಿಟ್ಟುಕೊಂಡಿರಿ.
ಅಗತ್ಯವಾಗಿರುವ ಚುಚ್ಚು ಮದ್ದುಗಳ ಬಗ್ಗೆ ಮಾಹಿತಿ ಪಡೆದಿರಿ. ನಾಯಿ ಮರಿಗೆ ಚುಚ್ಚು ಮದ್ದನ್ನು ಕೊಡಿಸಲು ಮರೆಯದಿರಿ.