alex Certify ಅಳಿದುಳಿದ ʼಆಹಾರʼ ಫ್ರಿಜ್‌ ನಲ್ಲಿಟ್ಟು ತಿನ್ನುವ ಮೊದಲು ಇದು ತಿಳಿದಿರಲಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಳಿದುಳಿದ ʼಆಹಾರʼ ಫ್ರಿಜ್‌ ನಲ್ಲಿಟ್ಟು ತಿನ್ನುವ ಮೊದಲು ಇದು ತಿಳಿದಿರಲಿ

ಕೆಲಸದ ಒತ್ತಡದಲ್ಲಿ ಜನರು ಸರಿಯಾದ ಸಮಯಕ್ಕೆ ಆಹಾರ ಸೇವನೆ ಮಾಡುವುದಿಲ್ಲ. ಅಷ್ಟೇ ಅಲ್ಲ ಸರಿಯಾದ ಆಹಾರವನ್ನೂ ಸೇವನೆ ಮಾಡುವುದಿಲ್ಲ. ಆಹಾರ ತಯಾರಿಸಿದ ತಕ್ಷಣ ಸೇವನೆ ಮಾಡುವ ಬದಲು ಅದನ್ನು ಫ್ರಿಜ್ ನಲ್ಲಿಟ್ಟು, ಮರುದಿನ ತಿನ್ನುವವರಿದ್ದಾರೆ. ಕೆಲವೊಮ್ಮೆ ತಯಾರಿಸಿದ ಆಹಾರ ಹೆಚ್ಚಾಗುತ್ತದೆ. ಅದನ್ನು ಫ್ರಿಜ್ ನಲ್ಲಿಟ್ಟು ಮರುದಿನ ಸೇವನೆ ಮಾಡುತ್ತೇವೆ. ಆಯುರ್ವೇದದ ಪ್ರಕಾರ ಇದು ತಪ್ಪು.

ಉಳಿದ ಆಹಾರವನ್ನು ಪುನಃ ಬಿಸಿ ಮಾಡಿದರೆ ಅದರಲ್ಲಿರುವ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳು ಸಾಯುತ್ತವೆ. ಇದರ ಸೇವನೆಯಿಂದ ದೇಹಕ್ಕೆ ಯಾವುದೇ ಪ್ರಯೋಜನವಿಲ್ಲ.

ಉಳಿದ ಆಹಾರ ತಾಜಾ ಆಹಾರ ನೀಡುವಷ್ಟು ಪೌಷ್ಟಿಕಾಂಶವನ್ನು ನೀಡುವುದಿಲ್ಲ. ಆಯುರ್ವೇದದ ಪ್ರಕಾರ, ಅಡುಗೆ ಮಾಡಿದ ಮೂರು ಗಂಟೆಗಳಲ್ಲಿ ಆಹಾರ ಸೇವಿಸಬೇಕು. 24 ಗಂಟೆಗಳಿಗಿಂತ ಹೆಚ್ಚು ಕಾಲ ಸಂಗ್ರಹಿಸಿಟ್ಟ ಆಹಾರವನ್ನು ಸೇವಿಸಬೇಡಿ.

ಆಹಾರ ಪದಾರ್ಥಗಳನ್ನು ಶೇಖರಿಸುವ ಮತ್ತು ಅವುಗಳನ್ನು ಪುನಃ ಬಿಸಿ ಮಾಡುವ ವಿಧಾನವು ಸರಿಯಾಗಿರಬೇಕು. ಇದರಿಂದ ಆಹಾರ ಪದಾರ್ಥಗಳಲ್ಲಿ ಬ್ಯಾಕ್ಟೀರಿಯಾ ಬೆಳೆಯುವುದಿಲ್ಲ. ಆಯುರ್ವೇದದ ಪ್ರಕಾರ, ಉಳಿದ ಆಹಾರವನ್ನು ಸರಿಯಾಗಿ ಶೇಖರಿಸಿಟ್ಟುಕೊಂಡು ಬಹಳ ಸಮಯದ ನಂತರ ಸೇವಿಸಿದರೆ ಅದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ.

ವಿಶೇಷವಾಗಿ ಮಾಂಸ ಮತ್ತು ಸಮುದ್ರಾಹಾರದಂತಹ ಆಹಾರ ಹೆಚ್ಚು ಕಾಲ ಇಟ್ಟಲ್ಲಿ ಬ್ಯಾಕ್ಟೀರಿಯಾ ಮತ್ತು ರೋಗಕಾರಕಗಳು ಬೆಳೆಯಲು ಆರಂಭವಾಗುತ್ತದೆ. ಈ ಆಹಾರವನ್ನು ಫ್ರಿಜ್ ನಲ್ಲಿ 24 ಗಂಟೆಗಳಿಗಿಂತ ಹೆಚ್ಚು ಕಾಲ ಇಟ್ಟಿದ್ದರೆ, ಅದನ್ನು ತಿನ್ನುವುದು ತುಂಬಾ ಹಾನಿಕಾರಕ.

ತಜ್ಞರ ಪ್ರಕಾರ, ಉಳಿದ ಆಹಾರವನ್ನು ಮತ್ತೆ ಬಿಸಿ ಮಾಡಿ ತಿನ್ನಬಹುದು. ಆದ್ರೆ ಆಹಾರ ಬಿಸಿಯಾಗುವುದರಿಂದ, ಅದರಲ್ಲಿರುವ ಪೋಷಕಾಂಶಗಳು  ನಾಶವಾಗುತ್ತವೆ. ಆಯುರ್ವೇದದ ಪ್ರಕಾರ, ತಾಜಾ ಆಹಾರವನ್ನು ತಿನ್ನುವುದು ಪೋಷಣೆಯನ್ನು ನೀಡುತ್ತದೆ.

ಹೆಚ್ಚಿನ ಜನರು ಆಹಾರ ಪದಾರ್ಥಗಳನ್ನು ಪುನಃ ಬಿಸಿ ಮಾಡುತ್ತಾರೆ. ಆದರೆ ಇದು ಸರಿಯಾದ ಅಭ್ಯಾಸವಲ್ಲ. ಕೆಲವೊಮ್ಮೆ ಆಹಾರ ವಿಷವೂ ಆಗಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...