alex Certify ಪ್ರತಿಷ್ಠಿತ ಮಂತ್ರಿ ಮಾಲ್​ಗೆ ಬಿಬಿಎಂಪಿಯಿಂದ ಬಿಗ್​ ಶಾಕ್​..! ಇಂದೇ ಬೀಳುತ್ತಾ ಬೀಗ..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರತಿಷ್ಠಿತ ಮಂತ್ರಿ ಮಾಲ್​ಗೆ ಬಿಬಿಎಂಪಿಯಿಂದ ಬಿಗ್​ ಶಾಕ್​..! ಇಂದೇ ಬೀಳುತ್ತಾ ಬೀಗ..?

ತೆರಿಗೆ ವಂಚಕರ ವಿರುದ್ಧ ಬಿಬಿಎಂಪಿ ಸಮರ ಮುಂದುವರಿದಿದೆ. ಆಸ್ತಿ ತೆರಿಗೆ ಕಟ್ಟುವಂತೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಮಂತ್ರಿ ಮಾಲ್​ಗೆ ಈಗಾಗಲೇ ಬಿಬಿಎಂಪಿ ಸಾಕಷ್ಟು ಬಾರಿ ವಾರ್ನಿಂಗ್​ ನೀಡಿದೆ. ಆದರೆ ಪಾಲಿಕೆಯ ಎಚ್ಚರಿಕೆಗೆ ಕ್ಯಾರೇ ಎನ್ನದ ಮಂತ್ರಿ ಮಾಲ್​ಗೆ ಇಂದೇ ಬಿಬಿಎಂಪಿ ಬೀಗ ಜಡಿಯಲಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಅಭಿಷೇಕ್ ಡೆವಲಪರ್ಸ್ ಹೆಸರಿನಲ್ಲಿ ಬಿಬಿಎಂಪಿಗೆ ತೆರಿಗೆ ಪಾವತಿ ಮಾಡುತ್ತಿರುವ ಮಂತ್ರಿ ಮಾಲ್​ 2018ರಿಂದ ಆಸ್ತಿ ತೆರಿಗೆ ಬಾಕಿ ಉಳಿಸಿಕೊಂಡಿದೆ. ಈಗಾಗಲೇ ಹಲವು ಬಾರಿ ಬಿಬಿಎಂಪಿ ಆಸ್ತಿ ತೆರಿಗೆ ಪಾವತಿಸುವಂತೆ ನೋಟಿಸ್​ ಕಳುಹಿಸಿದೆ. ಆದರೆ ಪಾಲಿಕೆಯ ನೋಟಿಸ್​ಗೆ ಮಂತ್ರಿ ಮಾಲ್​ನಿಂದ ಈವರೆಗೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹೀಗಾಗಿ ಇಂದೇ ಮಂತ್ರಿ ಮಾಲ್​​ಗೆ ಪಶ್ಚಿಮ ವಲಯ ಪಾಲಿಕೆ ಜಂಟಿ ಆಯುಕ್ತ ಡೆಡ್​ಲೈನ್​ ನೀಡಿದ್ದಾರೆ.

ಪ್ರತಿಷ್ಠಿತ ಮಂತ್ರಿ ಮಾಲ್​​ ಪಾಲಿಕೆಗೆ ಬರೋಬ್ಬರಿ 30,09,57,445 ರೂಪಾಯಿ ಆಸ್ತಿ ತೆರಿಗೆ ಪಾವತಿ ಮಾಡಬೇಕಿದೆ. ಇಂದು ಸಂಜೆಯೊಳಗಾಗಿ ಈ ಹಣವನ್ನು ಕಟ್ಟದೇ ಹೋದಲ್ಲಿ ಮಂತ್ರಿ ಮಾಲ್​ಗೆ ಪಾಲಿಕೆ ಬೀಗ ಜಡಿಯುವುದು ಪಕ್ಕಾ ಎನ್ನಲಾಗಿದೆ. ಕನಿಷ್ಟ 1 ವರ್ಷದ ಆಸ್ತಿ ತೆರಿಗೆ ಪಾವತಿ ಮಾಡದೇ ಹೋದಲ್ಲಿ ನಾಳೆಯಿಂದ ಮಾಲ್​ ತೆರೆಯಲು ಅವಕಾಶ ನೀಡುವುದಿಲ್ಲ ಎಂದು ಬಿಬಿಎಂಪಿ ಖಡಕ್​ ಎಚ್ಚರಿಕೆ ನೀಡಿದೆ. ಆಸ್ತಿ ತೆರಿಗೆ ಪಾವತಿಗೆ ಸಂಜೆ 5 ಗಂಟೆಯವರೆಗೆ ಕಾಲಾವಕಾಶ ನೀಡಲಾಗಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...