ಬೆಂಗಳೂರು: ರಾಜಧಾನಿ ಬೆಂಗಳೂರಿನ ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಪೀಠ ಬಿಬಿಎಂಪಿ ಮುಖ್ಯ ಎಂಜಿನಿಯರ್ ಗೆ ವಾರಂಟ್ ಜಾರಿಗೊಳಿಸಿದೆ.
ರಸ್ತೆ ಗುಂಡಿ ವಿಚಾರಕ್ಕೆ ಸಂಬಂಧಿಸಿದಂತೆ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆಗೆ ಬಿಬಿಎಂಪಿ ಮುಖ್ಯ ಎಂಜಿನಿಯರ್ ಬಿ.ಎಸ್.ಪ್ರಹ್ಲಾದ್ ಪದೇ ಪದೇ ಗೈರಾಗುತ್ತಿದ್ದು, ಇಂದು ನಡೆದ ಅರ್ಜಿ ವಿಚಾರಣೆ ವೇಳೆಯೂ ಅನಾರೋಗ್ಯ ನೆಪವೊಡ್ಡಿ ವಿಚಾರಣೆಗೆ ಹಾಜರಾಗಿರಲಿಲ್ಲ. ಈ ಬಗ್ಗೆ ಪಾಲಿಕೆ ಪರ ವಕೀಲ ಶ್ರೀನಿಧಿ ಕೋರ್ಟ್ ಗೆ ಮಾಹಿತಿ ನೀಡುತ್ತಿದ್ದಂತೆ ಕೆಂಡಾಮಂಡಲರಾದ ಹೈಕೋರ್ಟ್ ಸಿಜೆ ರಿತುರಾಜ್ ಅವಸ್ತಿ, ಮುಖ್ಯ ಎಂಜಿನಿಯರ್ ವಶಕ್ಕೆ ಪಡೆದು ಕೋರ್ಟ್ ಗೆ ಹಾಜರುಪಡಿಸಿ ಎಂದು ಬೆಂಗಳೂರು ಪೊಲಿಸ್ ಆಯುಕ್ತರಿಗೆ ಸೂಚನೆ ನೀಡಿದರು.
ಅವಸರದಲ್ಲಿ ವರನಿಗೆ ಮಾಲೆ ಹಾಕಲು ಹೋದ ಯುವತಿಗೆ ಏನಾಯ್ತು….? ವಿಡಿಯೊ ವೈರಲ್
ಇದೇ ವೇಳೆ ಚೀಫ್ ಎಂಜಿನಿಯರ್ ಪ್ರಹ್ಲಾದ್ ವಿರುದ್ಧ ವಾರಂಟ್ ಜಾರಿ ಮಾಡಿದ ಹೈಕೋರ್ಟ್ ಪೀಠ, ಇದಕ್ಕಿಂತ ಕಠಿಣ ಆದೇಶ ಹೊರಡಿಸಲು ಹಿಂದೇಟು ಹಾಕಲ್ಲ. ಜಾಮೀನು ರಹಿತ ವಾರಂಟ್ ಜಾರಿ ನಮಗೆ ಕಷ್ಟವಲ್ಲ ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದೆ. ಅರ್ಜಿ ವಿಚಾರಣೆ ನಾಳೆಗೆ ಮುಂದೂಡಿದೆ.