alex Certify ಬಿಬಿಸಿಯ ಮೊದಲ ಹಿಂದಿ ವಾರ್ತಾ ನಿರೂಪಕಿ ಇನ್ನಿಲ್ಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಬಿಸಿಯ ಮೊದಲ ಹಿಂದಿ ವಾರ್ತಾ ನಿರೂಪಕಿ ಇನ್ನಿಲ್ಲ

ಸುಮಾರು 60 ವರ್ಷಗಳ ಹಿಂದೆ ಬಿಬಿಸಿಯಲ್ಲಿ ಹಿಂದಿ ವಾರ್ತೆಗಳನ್ನು ಓದುವ ಮೂಲಕ ಬಿಬಿಸಿಯಲ್ಲಿ ಮೊದಲ ಬಾರಿಗೆ ಹಿಂದಿಯಲ್ಲಿ ವಾರ್ತೆ ವಾಚಿಸಿದ ಮಹಿಳೆ ಎಂಬ ಖ್ಯಾತಿಗೆ ಪಾತ್ರರಾಗಿದ್ದ ರಜನಿ ಕೌರ್​​ ಫರಿದಾಭಾದ್​ನಲ್ಲಿ ಮಂಗಳವಾರ ನಿಧನರಾಗಿದ್ದಾರೆ.

ಅವರಿಗೆ 93 ವರ್ಷ ವಯಸ್ಸಾಗಿತ್ತು.

ಪೇಶಾವರದಲ್ಲಿ ಜನಿಸಿ ಪಾಕಿಸ್ತಾನದಲ್ಲಿ ನೆಲೆಸಿದ್ದ ರಜನಿ ದೆಹಲಿಯ ಆಲ್​ ಇಂಡಿಯಾ ರೇಡಿಯೋದಲ್ಲಿಯೂ ಕೆಲಸ ಮಾಡಿದ್ದರು. ಇದಾದ ಬಳಿಕ ವಾಷಿಂಗಟ್ನ್​ನ ವಾಯ್ಸ್​ ಆಫ್​ ಅಮೇರಿಕ ಹಾಗೂ ಲಂಡನ್​​ನಲ್ಲಿ ಬಿಬಿಸಿಯಲ್ಲಿ ಸೇವೆ ಸಲ್ಲಿಸಿದ್ದಾರೆ.

ಬಿಬಿಸಿ ಹಿಂದಿ ಚಾನೆಲ್​ ಸೇರಿದ ಮೊದಲ ಮಹಿಳೆ ಹಾಗೂ ಬಿಬಿಸಿಯಲ್ಲಿ ಹಿಂದಿ ವಾರ್ತೆ ವಾಚಿಸಿದ ಮೊದಲ ಮಹಿಳೆ ಎಂಬ ಕೀರ್ತಿಯೂ ಇವರಿಗೆ ಸಲ್ಲುತ್ತದೆ. ರಜನಿ ಎಮಿನೆಂಟ್​ ಬ್ರಾಡ್​ಕಾಸ್ಟ್​ ಪತ್ರಕರ್ತ ದಿವಂಗತ ಮಹೇಂದ್ರ ಕೌಲ್​ ಜೊತೆ ವಿವಾಹವಾಗಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...