alex Certify ಉತ್ತರ ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ತಾಪಮಾನ; ಇವಿ ಚಾರ್ಜಿಂಗ್ ಸ್ವಾಪಿಂಗ್ ಸ್ಟೇಷನ್‌ ಗಳಲ್ಲಿ ಅವಘಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉತ್ತರ ಭಾರತದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ತಾಪಮಾನ; ಇವಿ ಚಾರ್ಜಿಂಗ್ ಸ್ವಾಪಿಂಗ್ ಸ್ಟೇಷನ್‌ ಗಳಲ್ಲಿ ಅವಘಡ

ಬೇಸಿಗೆ ಪ್ರಾರಂಭವಾಗುತ್ತಿದ್ದಂತೆ ಉತ್ತರ ಭಾರತದಲ್ಲಿ ಎಲೆಕ್ಟ್ರಿಕ್ ವೆಹಿಕಲ್ (ಇವಿ) ಬ್ಯಾಟರಿಗಳಿಗೆ ಬ್ಯಾಟರಿ ಸ್ಮಾರ್ಟ್-ಚಾಲಿತ ಸ್ವಾಪಿಂಗ್ ಸ್ಟೇಷನ್‌ಗಳಲ್ಲಿ ಬೆಂಕಿ ಹೊತ್ತಿಕೊಳ್ಳುತ್ತಿರುವ ಬಗ್ಗೆ ವರದಿಯಾಗ್ತಿದೆ.

ಯುವರ್‌ಸ್ಟೋರಿಯ ವಿಸ್ತೃತ ವರದಿಯ ಪ್ರಕಾರ ಈ ವಾರದ ಆರಂಭದಲ್ಲಿ ನವದೆಹಲಿಯ ಜನಕ್‌ಪುರಿ ಪ್ರದೇಶದಲ್ಲಿ ಇವಿ ಸ್ಟಾರ್ಟ್‌ಅಪ್‌ಗೆ ಸೇರಿದ ಬ್ಯಾಟರಿ ವಿನಿಮಯ ಕೇಂದ್ರವು ಬೆಂಕಿಗೆ ಆಹುತಿಯಾಗಿದೆ.

ಜನವರಿಯಲ್ಲಿ, ಲಕ್ನೋದ ಬಾದ್‌ಶಾ ನಗರದಲ್ಲಿ ಮತ್ತೊಂದು ಬ್ಯಾಟರಿ ವಿನಿಮಯ ಕೇಂದ್ರದಲ್ಲಿ ಬೆಂಕಿ ಕಾಣಿಸಿಕೊಂಡು ಓರ್ವ ವ್ಯಕ್ತಿ ಸಾವನ್ನಪ್ಪಿದರು.

ಕಳೆದ ವರ್ಷ ಮೇ ತಿಂಗಳಲ್ಲಿ ನೋಯ್ಡಾದ ಸಣ್ಣ ಬ್ಯಾಟರಿ ಸ್ಮಾರ್ಟ್ ಔಟ್‌ಲೆಟ್‌ಗೆ ಬೆಂಕಿ ಹೊತ್ತಿಕೊಂಡಿತು. ಈ ಘಟನೆಯ ಎರಡು ತಿಂಗಳ ನಂತರ, ದೆಹಲಿಯ ಸೀತಾಪುರಿ ಪ್ರದೇಶದ ಮತ್ತೊಂದು ಬ್ಯಾಟರಿ ಸ್ಮಾರ್ಟ್ ಸ್ವಾಪಿಂಗ್ ಸ್ಟೇಷನಲ್ಲಿ ಇದೇ ರೀತಿಯ ಘಟನೆ ನಡೆಯಿತು ಎಂದು ದಿ ಕೆನ್ ವರದಿ ಮಾಡಿದೆ.
ಶಾರ್ಟ್ ಸರ್ಕ್ಯೂಟ್ ಎರಡು ಬ್ಯಾಟರಿ ಪ್ಯಾಕ್‌ಗಳು ಹೆಚ್ಚು ಬಿಸಿಯಾಗಲು ಕಾರಣವಾಗಬಹುದು, ಬೆಂಕಿಯನ್ನು ಪ್ರಚೋದಿಸಬಹುದು ಎಂದು EV ಸ್ಟಾರ್ಟ್‌ಅಪ್ ಹೇಳಿಕೆಯಲ್ಲಿ ತಿಳಿಸಿದೆ.

ತಾಪಮಾನವು ಹೆಚ್ಚಾಗುತ್ತಿದ್ದಂತೆ ಇವಿಗಳು ಮತ್ತು ಬ್ಯಾಟರಿಗಳು ಬೆಂಕಿಯನ್ನು ಹೊತ್ತಿಸುವ ಭಯವು ಜನರ ಮನಸ್ಸನ್ನು ಮತ್ತೆ ಕಾಡುತ್ತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...