
ಕೊರೋನಾ ವೈರಸ್‌ನಿಂದಾಗಿ ಬಾವಲಿಗಳು ಕಳೆದ ಎರಡು ವರ್ಷಗಳಿಂದ ಮನುಕುಲದ ಸುದ್ದಿವಲಯದಲ್ಲಿ ನಕಾರಾತ್ಮಕ ಕಾರಣಗಳಿಗೆ ಸುದ್ದಿಯಲ್ಲಿವೆ.
ಆದರೆ ಆಂಧ್ರ ಪ್ರದೇಶದ ಚಿತ್ತೂರು ಜಿಲ್ಲೆಯ ಜನರು ಈ ಸಸ್ತನಿಗಳನ್ನು ತಮ್ಮ ಮಕ್ಕಳ ರಕ್ಷಕರೆಂದು ಆರಾಧಿಸುತ್ತಾರೆ. ಜಿಲ್ಲೆಯ ರಾಮಚಂದ್ರಾಪುರಂ ಮಂಡಲದ ನಡವಲೂರಿನ ಜನರಿಗೆ ಬಾವಲಿಯಲ್ಲಿರುವ ವಿಶೇಷ ಶಕ್ತಿಯಿಂದ ತಮ್ಮ ಮಕ್ಕಳಿಗೆ ಒಳ್ಳೆಯ ಆರೋಗ್ಯ ಲಭಿಸುತ್ತಿದೆ ಎಂಬ ನಂಬಿಕೆಯಿದೆ.
ಇತಿಹಾಸ ನಿರ್ಮಿಸಿದ ಎಲೋನ್ ಮಸ್ಕ್: ಒಂದೇ ದಿನದಲ್ಲಿ 2.71 ಲಕ್ಷ ಕೋಟಿ ರೂ. ಗಳಿಕೆ
ಊರಿನ ಹುಣಸೆ ಮರಗಳ ಮೇಲೆ ಹೆಚ್ಚಿನ ಬಾವಲಿಗಳು ವಾಸವಿದ್ದು, ಈ ಮರಗಳೀಗ ಪೂಜಾ ತಾಣಗಳಾಗಿವೆ. ಹನ್ನೊಂದು ಹುಣಸೇಮರಗಳಿರುವ ಬಾವಲಿಗಳ ಈ ತಾಣಕ್ಕೆ ನಿಮ್ಮನ್ನು ಸ್ವಾಗತಿಸಲು ದ್ವಾರವೊಂದನ್ನು ಸಹ ಕಟ್ಟಲಾಗಿದೆ.
ಬಹಳ ತಲೆಮಾರುಗಳಿಂದ ನಡೆದುಕೊಂಡು ಬಂದಿರುವ ಈ ಸಂಪ್ರದಾಯದಲ್ಲಿ, ಅನಾರೋಗ್ಯಕ್ಕೆ ಬಾಧಿತರಾದ ಮಕ್ಕಳನ್ನು ಇಲ್ಲಿಗೆ ಕರೆತರುವ ಜನರು, ಅವರಿಗೆ ಸ್ನಾನ ಮಾಡಿಸಿ, ಮರಗಳ ಬೇರುಗಳಿಗೆ ಬಟ್ಟೆಗಳನ್ನು ಕಟ್ಟುತ್ತಾರೆ. ತಮ್ಮ ಮಕ್ಕಳಿಗೆ ಆರೋಗ್ಯವನ್ನು ಮರಳಿ ನೀಡಲು ಹೆತ್ತವರು ಬಾವಲಿಗಳಲ್ಲಿ ಪ್ರಾರ್ಥಿಸುತ್ತಾರೆ. ಬಾವಲಿಗಳಿಗೆ ತೊಂದರೆ ಕೊಡುವ ಮಂದಿಯನ್ನು ಮರಗಳಿಗೆ ಕಟ್ಟಿ ಏಟು ನೀಡಲಾಗುತ್ತದೆ.