ಮೂವರು ವ್ಯಕ್ತಿಗಳು ಸೇರಿಕೊಂಡು ಕೊಳವೆಯೊಂದನ್ನ ವ್ಯಕ್ತಿಯ ಗುದನಾಳಕ್ಕೆ ಹಾಕಿ ಗಾಳಿಯನ್ನ ಬಿಟ್ಟಿದ್ದರಿಂದ 16 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಈ ಭೀಕರ ಘಟನೆ ಉತ್ತರ ಪ್ರದೇಶದ ಪಿಲಿಭಿತ್ ಜಿಲ್ಲೆಯಲ್ಲಿ ನಡೆದಿದೆ.
ಮೃತ ಅಪ್ರಾಪ್ತ ಪಿಲಿಭಿತ್ನ ಅಕ್ಕಿ ಗಿರಣಿಯಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ. ಮೃತ ಬಾಲಕನ ತಂದೆ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾರ್ಚ್ 4ನೇ ತಾರೀಖಿನಂದು ಮಿಲ್ ಕೆಲಸ ಮಾಡುತ್ತಿದ್ದ ಮೂವರು ಕೆಲಸಗಾರರು ಆತನ ಗುದದಾದ್ವಾರಕ್ಕೆ ಈ ನಳಿಕೆಯನ್ನ ಸಿಕ್ಕಿಸಿ ಗಾಳಿ ಊದಿದ್ದಾರೆ ಎಂದು ಹೇಳಿದ್ದಾರೆ.
ಮಾರ್ಚ್ 4ನೇ ತಾರೀಖಿನಂದು ಅಪ್ರಾಪ್ತ ಊಟವನ್ನ ಸೇವಿಸಿದ ಬಳಿಕ ಅಮಿತ್, ಸೂರಜ್ ಹಾಗೂ ಕಮಲೇಶ್ ಎಂಬವರು ಸೇರಿಕೊಂಡು ಮಿಲ್ನ ಏರ್ ಕಂಪ್ರೆಸರ್ನ್ನು ಬಾಲಕನ ಖಾಸಗಿ ಅಂಗಕ್ಕೆ ನುಸುಳಿಸಿದ್ದಾರೆ. ಹಾಗೂ ಗಾಳಿಯನ್ನ ಊದಿದ್ದಾರೆ ಎಂದು ಮೃತ ಬಾಲಕನ ತಂದೆ ಹೇಳಿದ್ದಾರೆ.
ಈ ಘಟನೆ ನಡೆಯುತ್ತಿದ್ದಂತೆ ಬಾಲಕನನ್ನ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈ ಸಂಬಂಧ ದೂರು ದಾಖಲಾಗಿದ್ದು ಪೊಲೀಸರು ಇಬ್ಬರು ಆರೋಪಿಗಳನ್ನ ಬಂಧಿಸಿದ್ದಾರೆ.