alex Certify ತನ್ನ ತಲೆಗೂದಲು ಮುಟ್ಟಿದ್ದ ಬಾಲಕನನ್ನು ಮತ್ತೆ ಭೇಟಿಯಾದ ಬರಾಕ್ ಒಬಾಮ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನ ತಲೆಗೂದಲು ಮುಟ್ಟಿದ್ದ ಬಾಲಕನನ್ನು ಮತ್ತೆ ಭೇಟಿಯಾದ ಬರಾಕ್ ಒಬಾಮ…!

ಅಮೆರಿಕಾದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ವಿಶೇಷ ಫೋಟೋ, ವಿಡಿಯೋ ಹಂಚಿಕೊಂಡು, ಹಳೆಯ ನೆನಪನ್ನು ತಿರುವಿ ಹಾಕಿದ್ದಾರೆ.

ಐಕಾನಿಕ್ ಎನಿಸಿರುವ 2009 ರ ಫೋಟೋದಲ್ಲಿ ತನ್ನ ಕೂದಲನ್ನು ಮುಟ್ಟಿದ 5 ವರ್ಷದ ಮಗುವಿನೊಂದಿಗೆ ಬರಾಕ್ ಒಬಾಮಾ ಪುನರ್ಮಿಲನದ ವಿಡಿಯೋವನ್ನು ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ.

ಒಬಾಮಾ ಅಧ್ಯಕ್ಷರಾಗಿದ್ದ ವೇಳೆ ಜಾಕೋಬ್ ಫಿಲಡೆಲ್ಫಿಯಾ ಹೆಸರಿನ ಮಗು ತನ್ನ ಸಹೋದರ ಮತ್ತು ಪೋಷಕರೊಂದಿಗೆ ಓವಲ್ ಕಚೇರಿಗೆ ಭೇಟಿ ನೀಡಿದ್ದ. ಇದೀಗ ಒಬಾಮಾ ವಯಸ್ಕನಾಗಿರುವ ಜಾಕೋಬ್ ನಡುವಿನ ಚರ್ಚೆ ಮತ್ತು ಹಳೆಯ ಘಟನೆ ಮೆಲುಕು ಹಾಕುವ ವಿಡಿಯೋ ಸಿದ್ಧಪಡಿಸಿ ಜನರೆದುರು ಹಂಚಿಕೊಂಡಿದ್ದಾರೆ.

ದೆಹಲಿ: 3 ದಿನದಲ್ಲಿ ಇ-ಬಸ್ ಏರಿದ 1 ಲಕ್ಷ ಪ್ರಯಾಣಿಕರು…..!

ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕೆಲಸ ಮಾಡುತ್ತಿದ್ದ ತಂದೆಯೊಂದಿಗೆ ಜಾಕೋಬ್ ಓವಲ್ ಕಚೇರಿಗೆ ಭೇಟಿ ನೀಡಿದಾಗಿನ ಫೋಟೋವನ್ನು ಒಬಾಮ‌ ಮೊದಲು ವಿವರಿಸುತ್ತಾರೆ.

ಜಾಕೋಬ್ ಹಿರಿಯ ಸಹೋದರ ಪಾಲಿಸಿ ಮತ್ತು ಬಜೆಟ್ ಬಗ್ಗೆ ಪ್ರಶ್ನೆಗಳನ್ನು ಹೊಂದಿದ್ದ ಅದರೆ ಜಾಕೋಬ್ “ನಿಮ್ಮ ಕೂದಲು ನನ್ನಂತೆಯೇ ಇದೆಯೇ?” ಕೇಳಿದ್ದ. ಈ ವೇಳೆ ಒಬಾಮ ತಮ್ಮ‌ ನಡು ಬಗ್ಗಿಸಿ ತಲೆ ಮುಟ್ಟಲು ಆ ಬಾಲಕನಿಗೆ ಅವಕಾಶ ನೀಡಿದ್ದರು. ಇದೆಲ್ಲವನ್ನು ಒಬಾಮ ಜಾತಾಣದಲ್ಲಿ ಹಂಚಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...