ಬ್ರಿಟನ್‌ನ ಎಸ್ಸೆಕ್ಸ್‌ನ ರೇಲ್ವೇ ವೀರ್ ಜಂಕ್ಷನ್‌ನಲ್ಲಿ ನಿಗೂಢವಾದ ಬ್ಯಾನರ್ ಒಂದು ಕಂಡುಬಂದಿದ್ದು, “ಐ ಆಮ್ ಸಾರಿ ಟಾಮ್. ದಯವಿಟ್ಟು ನನ್ನನ್ನು ಕ್ಷಮಿಸು” ಎಂದು ಬರೆಯಲಾಗಿದೆ.
ಯಾರು ಯಾರಿಗೆ ಕ್ಷಮೆ ಕೇಳುತ್ತಿದ್ದಾರೆ ಎಂದು ಬ್ಯಾನರ್‌ನಲ್ಲಿ ಸ್ಪಷ್ಟವಾಗಿಲ್ಲ. ಆದರೆ ಈ ಬ್ಯಾನರ್ ಅನ್ನು ಪ್ರಮುಖ ರಸ್ತೆಯೊಂದರಲ್ಲಿ ಹಾಕಿರುವ ಕಾರಣ ಸುಲಭವಾಗಿ ಕಣ್ಣಿಗೆ ಬೀಳುತ್ತಿದೆ.
ರೈಲ್ವೇ ಹಳಿಗೆ ಬಿದ್ದವನನ್ನು ರಕ್ಷಿಸಿದ ವ್ಯಕ್ತಿ: ಮೈ ಜುಮ್ಮೆನ್ನಿಸುವ ವಿಡಿಯೋ ವೈರಲ್
ಬ್ಯಾನರ್‌ನ ಫೋಟೋವೊಂದನ್ನು ಸೆರೆ ಹಿಡಿದ ಕ್ಲೇರ್ ಹಾರ್ವೆ ಹೆಸರಿನ ನೆಟ್ಟಿಗರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಪೋಸ್ಟ್‌ಗೆ ನೆಟ್ಟಿಗರಿಂದ ಥರಾವರಿ ಕಾಮೆಂಟುಗಳು ಬಂದಿದ್ದು, ಟಾಮ್ ಯಾರು ಮತ್ತು ಆತನಿಗೆ ಏಕೆ ಕ್ಷಮೆ ಕೇಳಲಾಗುತ್ತಿದೆ ಎಂಬೆಲ್ಲಾ ಪ್ರಶ್ನೆಗಳು ಬಂದಿವೆ.