ಕಳೆದ ಐದು ವರ್ಷಗಳಲ್ಲಿ 9.54 ಲಕ್ಷ ಕೋಟಿ ರೂಪಾಯಿಗಳಷ್ಟು ಕೆಟ್ಟ ಸಾಲವನ್ನು ಮರಳಿ ಪಡೆಯಲು ದೇಶದ ವಾಣಿಜ್ಯ ಬ್ಯಾಂಕುಗಳು ವಿಫಲವಾಗಿದ್ದು, ಇವುಗಳಲ್ಲಿ 7 ಲಕ್ಷ ಕೋಟಿ ರೂ.ಗಳು ಸಾರ್ವಜನಿಕ ಸ್ವಾಮ್ಯದ ಬ್ಯಾಂಕುಗಳದ್ದೇ ಪಾಲಾಗಿದೆ.
ವಸೂಲು ಮಾಡಿದ ಸಾಲದ ಎರಡು ಪಟ್ಟಿಗಿಂತ ಹೆಚ್ಚಿನ ಮೊತ್ತವನ್ನು ಕೈಬಿಡಲಾಗಿದೆ ಎಂಬ ಅಂಶವು ಆರ್.ಬಿ.ಐ. ಬಿಡುಗಡೆ ಮಾಡಿದ ದತ್ತಾಂಶದಿಂದ ತಿಳಿದು ಬಂದಿದೆ.
Banking alert..! ಎಟಿಎಂ ಬಳಕೆದಾರರಿಗೆ ಬೀಳಲಿದೆ ಮತ್ತಷ್ಟು ಹೊರೆ
ಲೋಕ್ ಅದಾಲತ್‌ಗಳು, ಸಾಲ ವಸೂಲಾತಿ ನ್ಯಾಯಮಂಡಳಿಗಳು, ಸರ್ಫೇಸಿ ಕಾಯಿದೆ, ಮತ್ತು ದಿವಾಳಿತನ ಕಾಯಿದೆ (ಐಪಿಸಿ) ಅಡಿ 4.14 ಲಕ್ಷ ಕೋಟಿ ರೂ.ಗಳನ್ನು ಸಾಲ ಮರುಪಾವತಿ ರೂಪದಲ್ಲಿ ಇದೇ ಅವಧಿಯಲ್ಲಿ ಪಡೆಯಲು ಸಫಲವಾಗಿವೆ ಎಂದು ರಿಸರ್ವ್ ಬ್ಯಾಂಕ್ ದತ್ತಾಂಶವೊಂದು ತಿಳಿಸಿದೆ.
ಬ್ಯಾಂಕುಗಳ ಪುನಶ್ಚೇತನಕ್ಕಾಗಿ 2014ರಿಂದಲೂ ಕೇಂದ್ರ ಸರ್ಕಾರ ನಿರಂತರವಾಗಿ ಕೊಡುತ್ತಾ ಬಂದಿರುವ ನೆರವಿನ ಎರಡು ಪಟ್ಟಿಗಿಂತ ಹೆಚ್ಚಿನ ಮೊತ್ತವು ಕೆಟ್ಟ ಸಾಲದ ರೂಪದಲ್ಲಿ ಕೊಳೆಯುತ್ತಿರುವುದು ದೇಶದ ಬ್ಯಾಂಕಿಂಗ್ ವ್ಯವಸ್ಥೆಗೆ ದೊಡ್ಡ ಹೊರೆಯಾಗಿದೆ.