ಸಾಲಗಾರರ ಅನುಮತಿ ಪಡೆಯದೇ ಬ್ಯಾಂಕುಗಳು ತಮ್ಮ ಗೃಹ ಸಾಲದ ಮೇಲಿನ ಬಡ್ಡಿದರದಲ್ಲಿ ಬದಲಾವಣೆ ಮಾಡುವಂತಿಲ್ಲ ಎಂದು ದೆಹಲಿ ಗ್ರಾಹಕ ಆಯೋಗ ಮಹತ್ವದ ಆದೇಶ ನೀಡಿದೆ.
ಬಡ್ಡಿದರಗಳಲ್ಲಿ ಸ್ವಯಂಚಾಲಿತ ಬದಲಾವಣೆಯು ’ನ್ಯಾಯಸಮ್ಮತವಲ್ಲದ ವ್ಯಾಪಾರದ ನೀತಿ’ಯಾಗಿದೆ ಎಂದ ನ್ಯಾಯಮೂರ್ತಿ ಸಂಗೀತಾ ಧಿಂಗ್ರಾ ನೇತೃತ್ವದ ಆಯೋಗ, ’ಫ್ಲೋಟಿಂಗ್ ದರದ’ ಬಡ್ಡಿಯ ಪ್ಲಾನ್‌ಗಳ ಮೂಲಕ ಗೃಹ ಸಾಲದ ಮೇಲಿನ ಬಡ್ಡಿದರಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಗಳು ಇದ್ದಲ್ಲಿ ಬ್ಯಾಂಕುಗಳು ತಮ್ಮ ಗ್ರಾಹಕರಿಗೆ ಮೊದಲೇ ಗಮನಕ್ಕೆ ತರಬೇಕು ಎಂದು ತಿಳಿಸಿದೆ.
ವಿಚಿತ್ರ ಕಾರಣಕ್ಕೆ ವಿಶ್ವ ದಾಖಲೆ ನಿರ್ಮಿಸಿದ ಬ್ರಿಟಿಷ್ ದಂಪತಿ..!
ಸಾಮಾನ್ಯವಾಗಿ ಬ್ಯಾಂಕುಗಳು ಗೃಹ ಸಾಲದ ಮೇಲೆ ಫ್ಲೋಟಿಂಗ್ ರೇಟ್ ಅಥವಾ ನಿಗದಿತ ಬಡ್ಡಿದರಗಳ ಸಾಲಗಳನ್ನು ಕೊಡುತ್ತವೆ. ಸ್ಥಿರ ಸಾಲದ ಪ್ಲಾನ್‌ನಲ್ಲಿ ಸಾಲದ ಅಷ್ಟೂ ಅವಧಿಗೆ ಬಡ್ಡಿದರವನ್ನು ನಿಗದಿ ಮಾಡಲಾಗಿರುತ್ತದೆ. ಈ ಪ್ಲಾನ್‌ನಲ್ಲಿ ಸಾಲಗಾರರು ಬ್ಯಾಂಕಿಗೆ ಮರುಪಾವತಿ ಮಾಡಬೇಕಾದ ಕಂತುಗಳಲ್ಲಿ ಯಾವುದೇ ಬದಲಾವಣೆ ಆಗದು.
ಸಿಸಿ ಟಿವಿ ಮೇಲೆ ನಿಗಾ ಇರಿಸುವವರಿಗೆ ಹಣ ನೀಡ್ತಿದೆ ಈ ಕಂಪನಿ..!
ಫ್ಲೋಟಿಂಗ್ ದರದ ಪ್ಲಾನ್‌ಗಳಲ್ಲಿ ಮಾರುಕಟ್ಟೆಯ ಟ್ರೆಂಡ್‌ಗಳನ್ನು ಅವಲಂಬಿಸಿ ಹೆಚ್ಚು/ಕಡಿಮೆ ಎಂದು ಬದಲಾವಣೆ ಆಗುತ್ತಿರುತ್ತದೆ.