ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ ಹಾಗೂ ಇಂಡಿಯನ್ ಓವರ್‌ಸೀಸ್ ಬ್ಯಾಂಕ್‌ಗಳಲ್ಲಿ (ಐಒಬಿ) ತನ್ನ ಪಾಲಿನ ಹೊಣೆಗಾರಿಕೆಯನ್ನು ಮಾರಾಟ ಮಾಡಲು ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಚಿಂತನೆ ನಡೆಸಿದ್ದು ಇನ್ನೇನು ಈ ವಿಚಾರವಾಗಿ ಅಂತಿಮ ರೂಪುರೇಷೆಗಳನ್ನು ಹೊರತರುವ ಸಾಧ್ಯತೆ ಇದೆ.
ಚಿಂತಕರ ಚಾವಡಿ ನೀತಿ ಆಯೋಗ ಖಾಸಗೀಕರಣಕ್ಕೆ ಈ ಬ್ಯಾಂಕುಗಳ ಹೆಸರನ್ನು ಸೂಚಿಸಿದೆ. ಈ ಸಂಬಂಧ ಪ್ರಸ್ತಾವನೆಯೊಂದನ್ನು ಅಂತರ್-ಸಚಿವಾಲಯದ ಅಧಿಕಾರಿಗಳ ಸಮೂಹವೊಂದು ಪರಿಶೀಲಿಸುತ್ತಿದ್ದು ಶೀಘ್ರವೇ ಕೇಂದ್ರ ಸಚಿವ ಸಂಪುಟದ ಅನುಮೋದನೆಯ ಮೊಹರು ಬೀಳುವ ಸಾಧ್ಯತೆ ಇದೆ.
ಇದೇ ವಿತ್ತೀಯ ವರ್ಷದಲ್ಲಿ ಐಡಿಬಿಐ ಬ್ಯಾಂಕಿನ ಮಾರಾಟವನ್ನೂ ಕೇಂದ್ರ ಸರ್ಕಾರ ಅಂತಿಮಗೊಳಿಸುವ ಸಾಧ್ಯತೆ ಇದೆ.