ಬ್ಯಾಂಕ್ ಆಫ್ ಬರೋಡಾ ಸಾಲದ ದರವನ್ನು 5 ಬಿಪಿಎಸ್ ಹೆಚ್ಚಿಸಿದೆ. ಆಗಸ್ಟ್ 12, 2024 ರಿಂದ ಜಾರಿಗೆ ಬರುವಂತೆ, 3-ತಿಂಗಳು, 6-ತಿಂಗಳು ಮತ್ತು 1-ವರ್ಷದ ಅಧಿಕಾರಾವಧಿಯಲ್ಲಿ 5 ಬೇಸಿಸ್ ಪಾಯಿಂಟ್ ಗಳಿಂದ(ಬಿಪಿಎಸ್) ಸಾಲದ ದರಗಳನ್ನು ಹೆಚ್ಚಿಸುವುದಾಗಿ ಬ್ಯಾಂಕ್ ಆಫ್ ಬರೋಡಾ ಶುಕ್ರವಾರ ಘೋಷಿಸಿದೆ.
ಈ ಹೆಚ್ಚಳದೊಂದಿಗೆ ನಿಧಿ ಆಧಾರಿತ ಸಾಲದ ದರಗಳು(MCLR), ಸಾಲಗಾರರಿಗೆ EMI ಗಳು ಹೆಚ್ಚಾಗುತ್ತವೆ.
ಬ್ಯಾಂಕ್ ಆಫ್ ಬರೋಡಾ ಆಗಸ್ಟ್ 12ರಿಂದ ಜಾರಿಗೆ ಬರುವಂತೆ ನಿಧಿ ಆಧಾರಿತ ಸಾಲದ ದರವನ್ನು(MCLR) ಕನಿಷ್ಠ ವೆಚ್ಚವನ್ನು ಪರಿಶೀಲಿಸಿದೆ/ ಬದಲಾಯಿಸಿದೆ.
ಬ್ಯಾಂಕ್ ಆಫ್ ಬರೋಡಾ ತನ್ನ 3 ತಿಂಗಳ ಎಂಸಿಎಲ್‌ಆರ್ ಅನ್ನು ಶೇಕಡ 8.45 ರಿಂದ ಶೇಕಡ 8.50 ಕ್ಕೆ, ಅದರ 6 ತಿಂಗಳ ಎಂಸಿಎಲ್‌ಆರ್ ಅನ್ನು ಶೇಕಡ 8.70 ರಿಂದ ಶೇಕಡ 8.75 ಕ್ಕೆ ಮತ್ತು ಬೆಂಚ್‌ಮಾರ್ಕ್ 1 ವರ್ಷದ ಎಂಸಿಎಲ್‌ಆರ್ ಅನ್ನು ಶೇಕಡ 8.90 ರಿಂದ ಶೇಕಡ 8.95ಕ್ಕೆ ಹೆಚ್ಚಿಸಿದೆ. ಇದು ಪ್ರತಿ ಅಧಿಕಾರಾವಧಿಯಲ್ಲಿ 5 ಬಿಪಿಎಸ್ ಹೆಚ್ಚಳವಾಗಿದೆ.
ಏತನ್ಮಧ್ಯೆ, ಬ್ಯಾಂಕ್ ಆಫ್ ಬರೋಡಾ overnight MCLR ಮತ್ತು 1-ತಿಂಗಳ MCLR ಅನ್ನು ಕ್ರಮವಾಗಿ ಶೇಕಡ 8.15 ಮತ್ತು 8.35 ರಷ್ಟು ಬದಲಾಗದೆ ಇರಿಸಿದೆ.
2016 ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಪರಿಚಯಿಸಿದ ಎಂಸಿಎಲ್‌ಆರ್, ಆರ್‌ಬಿಐ ನಿಗದಿಪಡಿಸಿದ ಬೆಂಚ್‌ಮಾರ್ಕ್ ಬಡ್ಡಿ ದರವಾಗಿದ್ದು, ಬ್ಯಾಂಕ್‌ಗಳು ತಮ್ಮ ಸಾಲದ ದರಗಳನ್ನು ನಿರ್ಧರಿಸಲು ಬಳಸುತ್ತವೆ. ಬ್ಯಾಂಕ್‌ಗಳು ಈ ದರಕ್ಕಿಂತ ಕಡಿಮೆ ಸಾಲ ನೀಡಲು ಸಾಧ್ಯವಿಲ್ಲ. ಸಾಲದ ದರಗಳನ್ನು ನಿರ್ಧರಿಸುವಾಗ, ಬ್ಯಾಂಕುಗಳು MCLR ಅನ್ನು ಬಳಸುತ್ತವೆ.
MCLR ಹೆಚ್ಚಾದಾಗ, ಈ ದರಕ್ಕೆ ಲಿಂಕ್ ಮಾಡಲಾದ ಸಾಲಗಳ ಮೇಲಿನ ಬಡ್ಡಿದರ ಹೆಚ್ಚಳವಾಗುತ್ತದೆ. ಇದರಿಂದಾಗಿ ಸಾಲಗಾರರಿಗೆ EMI ಹೊರೆಯಾಗಲಿದೆ. ಒಟ್ಟಾರೆ ಸಾಲದ ವೆಚ್ಚವನ್ನು ಹೆಚ್ಚಿಸುತ್ತದೆ. ವೈಯಕ್ತಿಕ ಹಣಕಾಸು ಮತ್ತು ವ್ಯಾಪಾರ ಹೂಡಿಕೆಗಳ ಮೇಲೆ ಪರಿಣಾಮ ಬೀರುತ್ತದೆ.