alex Certify ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್….! ಕಡಿಮೆಯಾಗ್ತಿದೆ ಉಳಿತಾಯ ಖಾತೆ ಬಡ್ಡಿ ದರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬ್ಯಾಂಕ್ ಗ್ರಾಹಕರಿಗೆ ಬಿಗ್ ಶಾಕ್….! ಕಡಿಮೆಯಾಗ್ತಿದೆ ಉಳಿತಾಯ ಖಾತೆ ಬಡ್ಡಿ ದರ

ಸೆಪ್ಟೆಂಬರ್ ತಿಂಗಳಿನಲ್ಲಿ ಬ್ಯಾಂಕ್ ಗ್ರಾಹಕರಿಗೆ ಶಾಕ್ ಕಾದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಖಾತೆದಾರರಿಗೆ ಬೇಸರದ ಸುದ್ದಿ ನೀಡಿದೆ. ಸೆಪ್ಟೆಂಬರ್ ನಲ್ಲಿ ಈ ಬ್ಯಾಂಕ್ ನ ಉಳಿತಾಯ ಖಾತೆದಾರರಿಗೆ ಕಡಿಮೆ ಬಡ್ಡಿ ಸಿಗಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೆಪ್ಟೆಂಬರ್ 1 ರಿಂದ ಉಳಿತಾಯ ಖಾತೆಯ ಬಡ್ಡಿ ದರಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಮಾಹಿತಿಯ ಪ್ರಕಾರ, ಉಳಿತಾಯ ಖಾತೆಯ ಮೇಲಿನ ಬಡ್ಡಿ ದರವನ್ನು ಸೆಪ್ಟೆಂಬರ್ 1 ರಿಂದ ಕಡಿತಗೊಳಿಸಲಾಗುತ್ತದೆ. ವಾರ್ಷಿಕ ಬಡ್ಡಿ ದರ ಶೇಕಡಾ 3 ರಿಂದ 2.90 ಕ್ಕೆ ಇಳಿಯಲಿದೆ. ಈ ನಿಯಮ ಹೊಸ ಹಾಗೂ ಹಳೆ ಗ್ರಾಹಕರಿಬ್ಬರ ಮೇಲೂ ಪರಿಣಾಮ ಬೀರಲಿದೆ.

ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾತ್ರವಲ್ಲ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಬಡ್ಡಿ ದರವನ್ನು ಈ ಮೊದಲೇ ಕಡಿತಗೊಳಿಸಿದೆ. ಉಳಿತಾಯ ಖಾತೆಯ ಬಡ್ಡಿ ದರ ವಾರ್ಷಿಕ ಶೇಕಡಾ 2.70ಕ್ಕೆ ಇಳಿದಿದೆ. ಈ ಬ್ಯಾಂಕ್ ಗಳು ಐಡಿಬಿಐ, ಕೆನರಾ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ  ಬ್ಯಾಂಕ್ ಗಳು ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...