ಸೆಪ್ಟೆಂಬರ್ ತಿಂಗಳಿನಲ್ಲಿ ಬ್ಯಾಂಕ್ ಗ್ರಾಹಕರಿಗೆ ಶಾಕ್ ಕಾದಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್, ಖಾತೆದಾರರಿಗೆ ಬೇಸರದ ಸುದ್ದಿ ನೀಡಿದೆ. ಸೆಪ್ಟೆಂಬರ್ ನಲ್ಲಿ ಈ ಬ್ಯಾಂಕ್ ನ ಉಳಿತಾಯ ಖಾತೆದಾರರಿಗೆ ಕಡಿಮೆ ಬಡ್ಡಿ ಸಿಗಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೆಪ್ಟೆಂಬರ್ 1 ರಿಂದ ಉಳಿತಾಯ ಖಾತೆಯ ಬಡ್ಡಿ ದರಗಳನ್ನು ಕಡಿಮೆ ಮಾಡಲು ನಿರ್ಧರಿಸಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿದೆ. ಮಾಹಿತಿಯ ಪ್ರಕಾರ, ಉಳಿತಾಯ ಖಾತೆಯ ಮೇಲಿನ ಬಡ್ಡಿ ದರವನ್ನು ಸೆಪ್ಟೆಂಬರ್ 1 ರಿಂದ ಕಡಿತಗೊಳಿಸಲಾಗುತ್ತದೆ. ವಾರ್ಷಿಕ ಬಡ್ಡಿ ದರ ಶೇಕಡಾ 3 ರಿಂದ 2.90 ಕ್ಕೆ ಇಳಿಯಲಿದೆ. ಈ ನಿಯಮ ಹೊಸ ಹಾಗೂ ಹಳೆ ಗ್ರಾಹಕರಿಬ್ಬರ ಮೇಲೂ ಪರಿಣಾಮ ಬೀರಲಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ಮಾತ್ರವಲ್ಲ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡ ಬಡ್ಡಿ ದರವನ್ನು ಈ ಮೊದಲೇ ಕಡಿತಗೊಳಿಸಿದೆ. ಉಳಿತಾಯ ಖಾತೆಯ ಬಡ್ಡಿ ದರ ವಾರ್ಷಿಕ ಶೇಕಡಾ 2.70ಕ್ಕೆ ಇಳಿದಿದೆ. ಈ ಬ್ಯಾಂಕ್ ಗಳು ಐಡಿಬಿಐ, ಕೆನರಾ ಬ್ಯಾಂಕ್, ಕೋಟಕ್ ಮಹೀಂದ್ರಾ ಬ್ಯಾಂಕ್, ಬ್ಯಾಂಕ್ ಆಫ್ ಬರೋಡಾ ಬ್ಯಾಂಕ್ ಗಳು ಹೆಚ್ಚಿನ ಬಡ್ಡಿಯನ್ನು ನೀಡುತ್ತವೆ.