ನೀವೇನಾದರೂ ಎಟಿಎಂಗಳಲ್ಲಿ ನಿರಂತರವಾಗಿ ವ್ಯವಹಾರ ನಡೆಸುತ್ತಿದ್ದರೆ ಇಲ್ಲೊಂದು ಮುಖ್ಯವಾದ ಅಪ್ಡೇಟ್ ಇದೆ. ಹೊಸ ವರ್ಷದ ದಿನದಿಂದ ಎಟಿಎಂಗಳಲ್ಲಿ ಹಣ ಹಿಂಪಡೆಯಲು ಗ್ರಾಹಕರು ಹೆಚ್ಚುವರಿಯಾದ ಶುಲ್ಕ ನೀಡಬೇಕಾಗುತ್ತದೆ. ಉಚಿತವಾಗಿ ಹಣ ಹಿಂಪಡೆಯಲು ಇರುವ ವ್ಯವಹಾರಗಳ ಸಂಖ್ಯೆ ಮೀರಿದಾಗ ಈ ಶುಲ್ಕ ಅನ್ವಯವಾಗುತ್ತದೆ. ಈ ವಿಚಾರವಾಗಿ ಆರ್‌ಬಿಐ ಅದಾಗಲೇ ಗ್ರಾಹಕರಿಗೆ ತಿಳುವಳಿಕೆ ನೀಡಿದೆ.
“ಗ್ರಾಹಕರಿಗೆ ತಮ್ಮದೇ ಬ್ಯಾಂಕುಗಳ ಎಟಿಎಂಗಳಲ್ಲಿ ಪ್ರತಿ ತಿಂಗಳು ಐದು ಉಚಿತ ವ್ಯವಹಾರಗಳ ಮಿತಿ ಇದೆ. ಅನ್ಯ ಬ್ಯಾಂಕುಗಳ ಎಟಿಎಂಗಳಲ್ಲಿ, ಮೆಟ್ರೋ ನಗರಗಳಲ್ಲಿ ಮೂರು ಉಚಿತ ಹಾಗೂ ಮೆಟ್ರೋಯೇತರ ನಗರಗಳ್ಲಿ ಐದು ಉಚಿತ ವ್ಯವಹಾರಗಳನ್ನೂ ಮಾಡಬಹುದು.
ಉಚಿತ ವ್ಯವಹಾರಗಳ ಆಚೆಗೆ, ಆಗಸ್ಟ್ 2014ರಲ್ಲಿ ಹೊರಡಿಸಲಾಗಿದ್ದ ಸುತ್ತೋಲೆ ಪ್ರಕಾರ ಪ್ರತಿ ವ್ಯವಹಾರಕ್ಕೆ 20ರೂಪಾಯಿಯ ಶುಲ್ಕವಿತ್ತು. ಹೆಚ್ಚುವರಿಯಾದ ಅಂತರವಹಿವಾಟು ಶುಲ್ಕ ಹಾಗೂ ಇತರೆ ವೆಚ್ಚಗಳನ್ನು ಭರಿಸಲು ನೆರವಾಗಲು ಪ್ರತಿ ವ್ಯವಹಾರದ ಮೇಲೆ 21ರೂ.ಗಳ ಶುಲ್ಕ ವಿಧಿಸಲು ಅನುಮತಿ ನೀಡಲಾಗಿದೆ. ಈ ಹೆಚ್ಚಳವು ಜನವರಿ 1, 2022ರಿಂದ ಅನ್ವಯವಾಗಲಿದೆ,” ಎಂದು ಆರ್‌ಬಿಐ ಗೊತ್ತುವಳಿ ಮೂಲಕ ತಿಳಿಸಿದೆ.
ಸೆಕ್ಷನ್ ತಪ್ಪಾದ ಬಳಕೆ ಕಾರಣಕ್ಕೆ ಎಫ್‌ಐಆರ್ ವಜಾಗೊಳಿಸಲಾಗದು: ಬಾಂಬೆ ಹೈಕೋರ್ಟ್ ಮಹತ್ವದ ಆದೇಶ
ಹೊಸ ವರ್ಷದಿಂದ, ಎಟಿಎಂಗಳಲ್ಲಿ ಮಾಡಲಾಗುವ ಉಚಿತ ಮಿತಿಗಳನ್ನು ಮೀರಿದ ವ್ಯವಹಾರಗಳಿಗೆ 21ರೂ.+ ಸ್ಥಳೀಯ ತೆರಿಗೆಗಳನ್ನು ಸೇರಿಸಿ ಶುಲ್ಕ ವಿಧಿಸಲಾಗುವುದು ಎಂದು ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಜಾಲತಾಣದಲ್ಲಿ ತಿಳಿಸಿದೆ.