
ಟೀಂ ಇಂಡಿಯಾ ಮೇಲೆ ಭಾರೀ ವಿಶ್ವಾಸವನ್ನು ಇಟ್ಟುಕೊಂಡಿದ್ದ ಅಭಿಮಾನಿಗಳಿಗೆ ಈ ಎರಡು ಹೀನಾಯ ಸೋಲುಗಳು ಭಾರೀ ನಿರಾಶೆಯನ್ನುಂಟು ಮಾಡಿವೆ. ಐಪಿಎಲ್ ಪಂದ್ಯಾವಳಿ ಮುಕ್ತಾಯಗೊಂಡ ಕೆಲವೇ ದಿನಗಳಲ್ಲಿ ಟಿ 20 ವರ್ಲ್ಡ್ಕಪ್ ಆರಂಭಗೊಂಡಿತ್ತು. ಯಾವುದೇ ರೀತಿಯ ಬ್ರೇಕ್ ಪಡೆಯದ ಆಟಗಾರರು ಟಿ 20 ವರ್ಲ್ಡ್ ಕಪ್ಗೆ ತೆರಳಿದ್ದರು. ಕೊಹ್ಲಿ ಪಡೆಯ ಸತತ ಸೋಲು ಕಂಡು ಕಂಗೆಟ್ಟಿರುವ ಅಭಿಮಾನಿಗಳು ಐಪಿಎಲ್ ಬ್ಯಾನ್ ಮಾಡಿ ಎಂದು ಟ್ವಿಟರ್ನಲ್ಲಿ ಹೊಸ ಟ್ರೆಂಡ್ ಶುರು ಮಾಡಿದ್ದಾರೆ.
ಹೌದು..! #BanIPL ಎಂಬ ಟ್ರೆಂಡ್ ಟ್ವಿಟರ್ನಲ್ಲಿ ಸದ್ಯ ಭಾರೀ ಸದ್ದು ಮಾಡ್ತಿದೆ. ಸೆಮಿಫೈನಲ್ನಲ್ಲಿ ಸ್ಥಾನ ಪಡೆಯುವುದು ಟೀಂ ಇಂಡಿಯಾ ಪಾಲಿಗೆ ಕಬ್ಬಿಣದ ಕಡಲೆ ಎಂಬಂತಾಗಿದೆ. ಹೀಗಾಗಿ ಟೀಂ ಇಂಡಿಯಾ ಅಭಿಮಾನಿಗಳು ಐಪಿಎಲ್ನ್ನು ಶಪಿಸುತ್ತಿದ್ದಾರೆ.
ಐಪಿಎಲ್ನಲ್ಲಿ ಸಾಕಷ್ಟು ಹಣ ಸಿಗುವ ಕಾರಣದಿಂದ ಆಟಗಾರರಿಗೆ ವರ್ಲ್ಡ್ಕಪ್ನಂತಹ ಪಂದ್ಯಗಳು ಮುಖ್ಯ ಎಂದು ಎನಿಸುತ್ತಲೇ ಇಲ್ಲ ಎಂದು ಕಿಡಿಕಾರ್ತಿದ್ದಾರೆ.