ಮಂಡಿಯುದ್ದ ಇರುವ ಬಾಂಗ್ಲಾದೇಶದ ಈ ಹಸು ಭೂಮಿ ಮೇಲೆ ಬದುಕಿದ್ದ ಅತ್ಯಂತ ಕುಳ್ಳಗಿನ ಹಸು ಎಂಬ ಶ್ರೇಯಕ್ಕೆ ಮರಣಾನಂತರ ಪಾತ್ರವಾಗಿದೆ.
ಬರೀ 50.8 ಸೆಂಮೀ ನ ( 20 ಇಂಚು) ರಾಣಿ ಎಂಬ ಹೆಸರಿನ ಈ ಹಸು ಢಾಕಾದ ಹೊರ ವಲಯದಲ್ಲಿರುವ ಫಾರ್ಮ್ ಒಂದರಲ್ಲಿ ಇದ್ದ ವೇಳೆ ಭಾರೀ ಫೇಮಸ್ ಆಗಿದ್ದ ಕಾರಣ ಅದನ್ನು ನೋಡಲೆಂದೇ ಜನರು ಹೋಗುತ್ತಿದ್ದರು.
ಗಿನ್ನಿಸ್ ದಾಖಲೆ ಪುಸ್ತಕಗಳಲ್ಲಿ ರಾಣಿಯನ್ನು ಸೇರಿಸಲೆಂದು ಅದರ ಮಾಲೀಕರು ಅರ್ಜಿ ಹಾಕಿದಾಗಲೇ ದುರಂತ ಸಂಭವಿಸಿ, ದೇಹದೊಳಗೆ ಸಮತೋಲನ ತಪ್ಪಿ ರಾಣಿ ಮೃತಪಟ್ಟಿದ್ದಾಳೆ.
ಗ್ರಾಹಕರಿಗೆ ಈ ಬ್ಯಾಂಕ್ ನೀಡ್ತಿದೆ ಉಡುಗೊರೆ..! ಹಬ್ಬದ ಸಮಯದಲ್ಲಿ ಅಗ್ಗದ ಬಡ್ಡಿ ದರಕ್ಕೆ ಸಾಲ
ರಾಣಿಯ ಅರ್ಜಿಯನ್ನು ಗಿನ್ನಿಸ್ ದಾಖಲೆಗಳ ಪುಸ್ತಕ ಸೇರಿಸಲು ಒಪ್ಪಿರುವುದಾಗಿ ಹಸುವಿನ ಮಾಲೀಕ ಕಾಜ಼ಿ ಮೊಹಮ್ಮದ್ ಅಬು ಸುಫಿಯಾನ್‌ಗೆ ಸೋಮವಾರ ಇ-ಮೇಲ್ ಬಂದಿದೆ.
ಈ ಹಿಂದೆ ಭಾರತದ ಹಸು ಮಾಣಿಕ್ಯಂ 61 ಸೆಂಮೀ ಉದ್ದವಿದ್ದು, ಜಗತ್ತಿನ ಅತ್ಯಂತ ಗಿಡ್ಡ ಹಸುವೆಂಬ ಶ್ರೇಯಕ್ಕೆ ಭಾಜನವಾಗಿತ್ತು.