ಕೊರೊನಾದಿಂದಾಗಿ ಉದ್ಯಮದಲ್ಲಿ ಈಗಾಗಲೇ ಸಾಕಷ್ಟು ನಷ್ಟ ಅನುಭವಿಸಿದ್ದಾರೆ. ಕೊರೊನಾದ ಬಿಸಿ ಕ್ಯಾಬ್ ಉದ್ಯಮದವರಿಗೂ ತಟ್ಟಿದೆ. ಈಗಲೂ ಜನರು ಕ್ಯಾಬ್ ಏರಲು ಭಯ ಪಡುವಂತಹ ಪರಿಸ್ಥಿತಿ ಇದೆ. ಹೀಗಾಗಿ ಜನರ ಈ ಗೊಂದಲವನ್ನ ನಿವಾರಿಸುವ ಸಲುವಾಗಿ ಬ್ಯಾಂಕಾಂಕ್ನ ಕ್ಯಾಬ್ ಡ್ರೈವರ್ ಒಬ್ಬ ತಾನು ಕೋವಿಡ್ ಲಸಿಕೆ ಪಡೆದಿರೋದಾಗಿ ಮೂರು ಭಾಷೆಗಳಲ್ಲಿ ಕಾಣುವಂತಹ ಬೋರ್ಡ್ ನ್ನು ಕಾರಿನ ಮೇಲೆ ಅಳವಡಿಸಿದ್ದಾನೆ.
ಈ ಬೋರ್ಡ್ ನೋಡಿದ ಬಳಿಕ ಪ್ರಯಾಣಿಕರಿಗೆ ನನ್ನ ಕ್ಯಾಬ್ನ್ನು ಏರಲು ಧೈರ್ಯ ಬರಬಹುದು. ಇದರಿಂದ ನನ್ನ ಆದಾಯ ಕೂಡ ಹೆಚ್ಚಬಹುದು ಎಂದು ಕ್ಯಾಬ್ ಚಾಲಕ ಹೇಳಿದ್ದಾನೆ.
ATTENTION: ವಿಲೀನಗೊಂಡ ಈ ಬ್ಯಾಂಕ್ ಗ್ರಾಹಕರಿಗೆ IFSC ಕೋಡ್, ಚೆಕ್ ಬುಕ್ ಬದಲಾವಣೆ ಬಗ್ಗೆ ಮುಖ್ಯ ಮಾಹಿತಿ
43 ವರ್ಷದ ಚಾಲಕ ತನ್ನ ಕಾರಿನ ಮೇಲೆ ವ್ಯಾಕ್ಸಿನ್ ಹಾಗೂ ಕೋವಿಡ್ ಎಂದು ಬರೆದು ಅದರ ಮುಂದೆ ಸರಿ ಸಂಕೇತವನ್ನ ಬರೆಯಿಸಿದ್ದಾನೆ.
15000 ರೂ.ಗೆ ಈ ಬ್ಯುಸಿನೆಸ್ ಶುರು ಮಾಡಿ ಗಳಿಸಿ ಲಕ್ಷಾಂತರ ರೂ.
ಇದರ ಅರ್ಥ ಕ್ಯಾಬ್ ಚಾಲಕ ಕೊರೊನಾ ಲಸಿಕೆಯನ್ನ ಸ್ವೀಕರಿಸಿದ್ದು ಪ್ರಯಾಣಿಕರು ಹೆದರುವ ಅವಶ್ಯಕತೆ ಇಲ್ಲ ಎಂಬರ್ಥವನ್ನ ಹೊಂದಿದೆ,