alex Certify ಫಟಾಫಟ್​ ತಯಾರಿಸಿ ಬಾಳೆ ಹಣ್ಣಿನ ಮಿಲ್ಕ್​ ಶೇಕ್​….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಫಟಾಫಟ್​ ತಯಾರಿಸಿ ಬಾಳೆ ಹಣ್ಣಿನ ಮಿಲ್ಕ್​ ಶೇಕ್​….!

ಬೇಕಾಗುವ ಸಾಮಗ್ರಿಗಳು : ಬಾಳೆಹಣ್ಣು : 4, ಹಾಲು – 1 ಕಪ್​. ಸಕ್ಕರೆ – 2 ದೊಡ್ಡ ಚಮಚ, ಗೋಡಂಬಿ – 1/4 ಕಪ್​, ಐಸ್​ಕ್ಯೂಬ್​ – (ಬೇಕು ಎನಿಸಿದರೆ ಮಾತ್ರ)

ಮಾಡುವ ವಿಧಾನ : ಗೋಡಂಬಿಯನ್ನು ಮಿಕ್ಸಿಗೆ ಹಾಕಿ ರುಬ್ಬಿಕೊಳ್ಳಿ. ಗೋಡಂಬಿ ಚೆನ್ನಾಗಿ ಪುಡಿಯಾದ ಬಳಿಕ ಇದೇ ಮಿಕ್ಸಿ ಜಾರಿಗೆ ಬಾಳೆಹಣ್ಣನ್ನು ಕಿವುಚಿ ಹಾಕಿ. ಜೊತೆಗೆ ಸಕ್ಕರೆಯನ್ನೂ ಸೇರಿಸಿ. ಇನ್ನೊಂದು ರೌಂಡ್​ ಮಿಕ್ಸಿ ತಿರುಗಿಸಿ. ಈಗ ಮಿಶ್ರಣವನ್ನು ಒಂದು ಪಾತ್ರೆಗೆ ಹಾಕಿ. ಇದಕ್ಕೆ ಹಾಲನ್ನು ಹಾಕಿ ಚೆನ್ನಾಗಿ ಕಲಿಸಿರಿ. ಬೇಕಾದಲ್ಲಿ 1 ಐಸ್​ ಕ್ಯೂಬ್​ ಹಾಕಿ ಲೋಟದಲ್ಲಿ ಸರ್ವ್​ ಮಾಡಿ. ಐಸ್​ ಕ್ಯೂಬ್​ ಬಳಕೆ ಮಾಡಲು ಇಷ್ಟವಿಲ್ಲದೇ ಇದ್ದಲ್ಲಿ. ಕಾಯಿಸಿದ ಹಾಲು ತಣ್ಣಗಾದ ಬಳಿಕ ಅದನ್ನು ಫ್ರಿಡ್ಜ್​ನಲ್ಲಿಟ್ಟು ಬಳಕೆ ಮಾಡಿದರೂ ಮಿಲ್ಕ್​ ಶೇಕ್​ ಸಖತ್​ ಕೂಲ್​ ಆಗಿ ಇರಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...