alex Certify ಪ್ರವಾಸಿಗರೇ ಗಮನಿಸಿ : ಕಾರ್ಕಳ ‘ಪರಶುರಾಮ ಥೀಂ ಪಾರ್ಕ್’ ಭೇಟಿಗೆ ನಿಷೇಧ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪ್ರವಾಸಿಗರೇ ಗಮನಿಸಿ : ಕಾರ್ಕಳ ‘ಪರಶುರಾಮ ಥೀಂ ಪಾರ್ಕ್’ ಭೇಟಿಗೆ ನಿಷೇಧ

ಉಡುಪಿ: ಕರಾವಳಿ ಜಿಲ್ಲೆಗಳಿಗೆ ಪ್ರವಾಸಕ್ಕೆ ಬರುವವರಿಗೆ ಮುಖ್ಯ ಮಾಹಿತಿ, ಜಿಲ್ಲೆಯ ಅತಿ ಎತ್ತರದ ಪರಶುರಾಮನ ಮೂರ್ತಿ ಇರುವ ‘ಥೀಂ ಪಾರ್ಕ್’ ಗೆ ತಾತ್ಕಾಲಿಕವಾಗಿ ಪ್ರವೇಶ ನಿಷೇಧಿಸಲಾಗಿದೆ.

ಜೂನ್ 26 ರಿಂದ ಸೆಪ್ಟೆಂಬರ್ ಅಂತ್ಯದವರೆಗೆ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿದೆ. ಜೂನ್ 26 ರ ಸೋಮವಾರದಿಂದ ಸಾರ್ವಜನಿಕರ ಭೇಟಿಗೆ ನಿಷೇಧ ಹೇರಿ ಕಾರ್ಕಳದ ತಹಶೀಲ್ದಾರ್ ಆದೇಶ ಹೊರಡಿಸಿದ್ದಾರೆ,
ಥೀಂ ಪಾರ್ಕ್ ಕೆಲವೊಂದು ಕೆಲಸ ಕಾರ್ಯಗಳು ಬಾಕಿಯಿದ್ದ ಹಿನ್ನೆಲೆ, ಪರಶುರಾಮನ ಮೂರ್ತಿಯ ಹಲವು ಲೇಪನ ಕಾರ್ಯಗಳು ಬಾಕಿ ಇರುವ ಹಿನ್ನೆಲೆ ಜೂನ್ 26 ರಿಂದ ಸೆಪ್ಟೆಂಬರ್ ಅಂತ್ಯದವರೆಗೆ ಸಾರ್ವಜನಿಕರ ಭೇಟಿಯನ್ನು ನಿಷೇಧಿಸಲಾಗಿದೆ.

ಯರ್ಲಪಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿರುವ ಬರುವ ಪರಶುರಾಂ ಥೀಮ್ ಪಾರ್ಕ್ 100 ಅಡಿ ಎತ್ತರದ ಕುಂಜ ಬೆಟ್ಟದಲ್ಲಿದ್ದು, . ಇದನ್ನು ಕಳೆದ ಜನವರಿ 27 ರಂದು ಅಂದಿನ ಸಿಎಂ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಿದ್ದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...