ಬಲೂಚಿಸ್ತಾನ: ಭಾರತ ಹಾಗೂ ಪಾಕಿಸ್ತಾನದ ನಡುವೆ ರಾಜಕೀಯವಾಗಿ ಪರಸ್ಪರ ವೈರುಧ್ಯ ನಡೆಯುತ್ತಲೇ ಇರುತ್ತದೆ. ಪಾಕಿಸ್ತಾನ ಭಾರತದತ್ತ ಯಾವಾಗಲೂ ಕತ್ತಿ ಮಸೆಯುತ್ತಲೇ ಇರುತ್ತದೆ. ಆದರೆ ಸಾಂಸ್ಕೃತಿಕವಾಗಿ ಭಾರತ ಹಾಗೂ ಪಾಕಿಸ್ತಾನ ಸಂಬಂಧ ಚೆನ್ನಾಗಿದೆ ಅಂತಾನೆ ಹೇಳಬಹುದು.
ಕಲೆಯು ಎಲ್ಲಾ ರೀತಿಯ ಗಡಿಗಳನ್ನೂ ಮೀರಿ ಬೆಳೆದಿದೆ. ಕಲೆ, ಸಂಸ್ಕೃತಿಗೆ ಇರುವ ಶಕ್ತಿಯೇ ಅಂಥದ್ದು. ಅಂತೆಯೇ ಭಾರತ ಹಾಗೂ ಪಾಕಿಸ್ತಾನೀಯರನ್ನು ಒಂದುಗೂಡಿಸುವಲ್ಲಿ ಸಂಗೀತವೂ ತನ್ನ ಪಾತ್ರ ನಿರ್ವಹಿಸಿದೆ. ಹೌದು, ಪಾಕ್ ನ ಬಲೂಚಿಸ್ತಾನದ ಗಾಯಕ ವಹಾಬ್ ಅಲಿ ಬುಗ್ತಿ ಬಾಲಿವುಡ್ ನ ಪ್ರಸಿದ್ಧ ಚಿತ್ರ ‘ಕೇಸರಿ’ಯ ತೇರಿ ಮಿಟ್ಟಿ ಹಾಡನ್ನು ಗುಂಪಿನೊಂದಿಗೆ ಸಾಂಪ್ರದಾಯಿಕ ವಾದ್ಯಗಳನ್ನು ನುಡಿಸುವ ಮೂಲಕ ಹಾಡಿದ್ದು, ಭಾರತೀಯರನ್ನು ಮಂತ್ರಮುಗ್ಧಗೊಳಿಸಿದ್ದಾರೆ.
ಗಿರಿಧಾಮಗಳತ್ತ ದಾಖಲೆ ಪ್ರಮಾಣದಲ್ಲಿ ಪ್ರವಾಸಿಗರ ದೌಡು
ಹಾಡಿನ ಈ ದೃಶ್ಯವನ್ನು ಅವನಿಶ್ ಶರಣ್ ಎಂಬ ಐಎಎಸ್ ಅಧಿಕಾರಿ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದು, ಇವರ ಈ ಹಾಡು ಕೇಳಲು ಬಹಳ ಖುಷಿಯಾಗುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ. ಇದೀಗ ಇವರ ಹಾಡು ಸಖತ್ ವೈರಲ್ ಆಗಿದ್ದು, 50,000ಕ್ಕೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಗಾಯಕರ ಸಾಧನೆಯನ್ನು ಶ್ಲಾಘಿಸಿದ್ದಾರೆ.
https://twitter.com/AwanishSharan/status/1414058120188358658?ref_src=twsrc%5Etfw%7Ctwcamp%5Etweetembed%7Ctwterm%5E1414058120188358658%7Ctwgr%5E%7Ctwcon%5Es1_&ref_url=https%3A%2F%2Fwww.timesnownews.com%2Fthe-buzz%2Farticle%2Fbaloch-singers-rendition-of-teri-mitti-wins-hearts-online%2F783962