alex Certify ಗಿರಿಧಾಮಗಳತ್ತ ದಾಖಲೆ ಪ್ರಮಾಣದಲ್ಲಿ‌ ಪ್ರವಾಸಿಗರ ದೌಡು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಿರಿಧಾಮಗಳತ್ತ ದಾಖಲೆ ಪ್ರಮಾಣದಲ್ಲಿ‌ ಪ್ರವಾಸಿಗರ ದೌಡು

ಕೋವಿಡ್ ಲಾಕ್‌ಡೌನ್ ಸಡಿಲಿಸುತ್ತಲೇ ಅಗಾಧ ಸಂಖ್ಯೆಯಲ್ಲಿ ಗಿರಿಧಾಮಗಳತ್ತ ಬರುತ್ತಿರುವ ಜನರ ಫೋಟೋಗಳು ವೈರಲ್ ಆದ ಬಳಿಕ ಕೇಂದ್ರ ಸರ್ಕಾರ ಈ ನಿಟ್ಟಿನಲ್ಲಿ ಅಲರ್ಟ್ ಘೋಷಣೆ ಮಾಡಿದ್ದು, ಕುತೂಹಲಕಾರಿ ಸಂಖ್ಯೆಗಳು ಹೊರಬಂದಿವೆ.

ಕಳೆದ ವಾರಾಂತ್ಯವೊಂದರಲ್ಲೇ ಉತ್ತರಾಖಂಡದ ಗಿರಿಧಾಮಗಳಾದ ನೈನಿತಾಲ್‌ಗೆ 35,425 ಪ್ರವಾಸಿಗರು ಹಾಗೂ ಮಸ್ಸೂರಿಗೆ 32,000 ಮಂದಿ ಪ್ರವಾಸಿಗರು ಭೇಟಿ ಕೊಟ್ಟಿದ್ದರು ಎಂದು ಅಧಿಕೃತ ಅಂಕಿ ಅಂಶಗಳಿಂದ ತಿಳಿದುಬಂದಿದೆ. ದೇಶಾದ್ಯಂತ ಕೋವಿಡ್ ಪಾಸಿಟಿವ್ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಲೇ ಈ ರೀತಿ ಎಲ್ಲೆಂದರಲ್ಲಿ ಜನಜಂಗುಳಿ ಹೆಚ್ಚಾಗುತ್ತಿದೆ.

ಖಾದ್ಯದ ಮೂಲಕ ಇಂಗ್ಲೆಂಡ್‌ – ಇಟಲಿ ಅಭಿಮಾನಿಗಳನ್ನು ಅವಮಾನ ಮಾಡಿತಾ ಜಪಾನ್‌ ಡೊಮಿನೋಸ್…?

ಈ ಮಂದಿಯ ಪೈಕಿ 32,900 ಪ್ರವಾಸಿಗರನ್ನು ನೈನಿತಾಲ್‌ಗೆ ಹಾಗೂ 20,000 ಮಂದಿಯನ್ನು ಮಸ್ಸೂರಿಗೆ ತೆರಳಲು ಅನುಮತಿ ಕೊಡಲಾಗಿದೆ. ಮಿಕ್ಕವರನ್ನು ಕೋವಿಡ್ ನೆಗೆಟಿವ್ ಕಂಡುಬಂದಿಲ್ಲವೆಂದು ಹೊಟೇಲ್ ಬುಕಿಂಗ್ ವಿಫಲವಾದ ಬಳಿಕ ಮರಳಿ ಕಳುಹಿಸಲಾಗಿದೆ.

ಏಪ್ರಿಲ್ 22ರಿಂದ ವಾರಾಂತ್ಯದ ಲಾಕ್‌ಡೌನ್ ಇದ್ದ ಕಾರಣ ಕಳೆದ 2-3 ತಿಂಗಳುಗಳಿಂದ ಈ ಗಿರಿಧಾಮಗಳಲ್ಲಿ ಪ್ರವಾಸೀ ಚಟುವಟಿಕೆಗಳು ಕ್ಷೀಣಿಸಿದ್ದವು. ಹೀಗಾಗಿ ಲಾಕ್‌ಡೌನ್ ಸಡಿಲಿಕೆಯಾಗುತ್ತಲೇ ಜುಲೈನಲ್ಲಿ ಒಮ್ಮೆಲೇ 4-5 ಪಟ್ಟು ಪ್ರವಾಸಿಗರು ದೌಡಾಯಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...