ಬೆಂಗಳೂರು: ಬರ್ತಡೇ ಪಾರ್ಟಿಗೆ ಬಲೂನ್ ಗ್ಯಾಸ್ ಫಿಲ್ ಮಾಡುವಾಗ ಸ್ಫೋಟ ಸಂಭವಿಸಿ ಯುವಕನೊಬ್ಬ ಪ್ರಾಣ ಕಳೆದುಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. 19 ವರ್ಷದ ದಿನೇಶ್ ಮೃತಪಟ್ಟ ಯುವಕ ಎಂದು ಹೇಳಲಾಗಿದೆ.
ಪರಪ್ಪನ ಅಗ್ರಹಾರ ನಿವಾಸಿಯಾಗಿರುವ ದಿನೇಶ್ ಬರ್ತಡೇ ಪಾರ್ಟಿಗಳಿಗೆ ಬಲೂನ್ ಒದಗಿಸುವ ಜೊತೆಗೆ ಅಲಂಕಾರ ಮಾಡಿಕೊಡುತ್ತಿದ್ದರು. ಅಶೋಕನಗರದ ಅಪಾರ್ಟ್ ಮೆಂಟ್ ನಲ್ಲಿ ಬಲೂನ್ ಗೆ ಗ್ಯಾಸ್ ಫಿಲ್ ಮಾಡುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದ್ದು, ಸ್ಪೋಟದ ತೀವ್ರತೆಗೆ ದಿನೇಶ್ 10 ಅಡಿ ಎತ್ತರಕ್ಕೆ ಹಾರಿದ್ದು, ಮರಕ್ಕೆ ಬಡಿದು ಕೆಳಗೆ ಬಿದ್ದಿದ್ದಾರೆ. ಅವರ ದೇಹ ಛಿದ್ರವಾಗಿ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ನಾಲ್ಕು ವರ್ಷಗಳಿಂದ ದಿನೇಶ್ ಪಾರ್ಟಿಗಳಿಗೆ ಬಲೂನ್ ಒದಗಿಸುವ ಕೆಲಸ ಮಾಡಿಕೊಂಡಿದ್ದರು. ಬಲೂನ್ ಫಿಲಿಂಗ್ ಸಂದರ್ಭದಲ್ಲಿ ಸ್ಫೋಟ ಸಂಭವಿಸಿ ಪ್ರಾಣ ಕಳೆದುಕೊಂಡಿದ್ದಾರೆ ಎಂದು ಹೇಳಲಾಗಿದೆ.