
ವಿಡಿಯೋವನ್ನು ಯಮ್ಮಿ ಎಂಬ ಬಳಕೆದಾರರು ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಪ್ರವಾಸಿ ಗೈಡ್ ಜಲಪಾತದ ಬಳಿಯಲ್ಲಿ ಫೋಟೋಗೆ ಹೇಗೆ ಪೋಸ್ ನೀಡಬೇಕೆಂದು ದಂಪತಿಗೆ ಸೂಚಿಸುತ್ತಾ ಕಲಿಸುತ್ತಾರೆ.
ಗೈಡ್ ಫೋಟೋ ಕ್ಲಿಕ್ಕಿಸಲು ದೂರದಿಂದ ಪೋಸ್ ನೀಡಿದಾಗ, ದಂಪತಿ ಜಲಪಾತದ ಕೆಳಗೆ ನಿಂತು ಅವರನ್ನು ಅನುಕರಿಸುತ್ತಾರೆ.
ಆನ್‌ಲೈನ್‌ನಲ್ಲಿ ವಿಡಿಯೋ ಹಂಚಿಕೊಂಡ ನಂತರ ಹೆಚ್ಚು ವೀಕ್ಷಣೆ ಗಳಿಸಿದ್ದು ನೆಟ್ಟಿಗರು ಗೈಡ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.