alex Certify ಸೆಮಿಫೈನಲ್​ಗೆ ಲಗ್ಗೆಯಿಟ್ಟ ಭಜರಂಗ್​ ಪೂನಿಯಾ: ಒಲಿಂಪಿಕ್​​ ಪದಕಕ್ಕೆ ಇನ್ನೊಂದೇ ಹೆಜ್ಜೆ ದೂರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಸೆಮಿಫೈನಲ್​ಗೆ ಲಗ್ಗೆಯಿಟ್ಟ ಭಜರಂಗ್​ ಪೂನಿಯಾ: ಒಲಿಂಪಿಕ್​​ ಪದಕಕ್ಕೆ ಇನ್ನೊಂದೇ ಹೆಜ್ಜೆ ದೂರ

ಟೋಕಿಯೋ ಒಲಿಂಪಿಕ್ಸ್ ​ನಲ್ಲಿ 65 ಕೆಜಿ ಪುರುಷರ ಫ್ರೀ ಸ್ಟೈಲ್​​ ವಿಭಾಗದಲ್ಲಿ ಭಾರತವನ್ನು ಪ್ರತಿನಿಧಿಸುತ್ತಿರುವ ವಿಶ್ವದ ನಂಬರ್​ 2 ಕುಸ್ತಿಪಟು ಭಜರಂಗ್​ ಪೂನಿಯಾ ಒಲಿಂಪಿಕ್ಸ್​ ಪದಕವನ್ನು ಪಡೆಯಲು ಇನ್ನೊಂದೇ ಹೆಜ್ಜೆ ಸಾಗಬೇಕಿದೆ.

ಇರಾನಿನ ಮೊರ್ತೆಜಾ ಘಿಯಾಸಿ ಚೆಕಾ ಎದುರು 2-1 ಅಂತರದಲ್ಲಿ ಗೆಲುವು ಸಾಧಿಸಿರುವ ಪೂನಿಯಾ ಸೆಮಿಫೈನಲ್​ಗೆ ಲಗ್ಗೆ ಇಟ್ಟಿದ್ದಾರೆ. ಈ ಮೂಲಕ ಪೂನಿಯಾರ ಮೊದಲ ಒಲಿಂಪಿಕ್​​ ಪದಕದ ಕನಸು ನನಸಾಗಲು ಇನ್ನೊಂದೇ ಪಂದ್ಯ ಬಾಕಿ ಉಳಿದಂತಾಗಿದೆ.

ಕ್ವಾರ್ಟರ್​ ಫೈನಲ್​ ಪಂದ್ಯದ ಮೊದಲ ಸುತ್ತಿನಲ್ಲಿ ಇರಾನಿನ್ ಚೆಕಾ ಮುನ್ನಡೆ ಕಾಯ್ದುಕೊಂಡಿದ್ದಾರೆ. ಆದರೆ ಮುಂದಿನ ಸುತ್ತಿನಲ್ಲಿ ಇರಾನ್​ ಆಟಗಾರನನ್ನು ಮಣಿಸುವ ಮೂಲಕ 2-1 ಅಂತರದಲ್ಲಿ ಪೂನಿಯಾ ಗೆಲುವಿನ ನಗೆ ಬೀರಿದರು.

ಇಂದು ಮಧ್ಯಾಹ್ನ 2:55ರ ಸುಮಾರಿಗೆ ಸೆಮಿಫೈನಲ್​ ಪಂದ್ಯ ನಡೆಯಲಿದ್ದು, ಇದರಲ್ಲಿ ಪೂನಿಯಾ ಅಜರ್​ಬೈಜಾನಿಯಾದ ಹಾಜಿ ಆಲಿಯಾವ್​ ವಿರುದ್ಧ ಸೆಣಸಲಿದ್ದಾರೆ. ಈ ಪದಕದಲ್ಲಿ ವಿಜಯಶಾಲಿಯಾಗುವಲ್ಲಿ ಪೂನಿಯಾ ಯಶಸ್ವಿಯಾದಲ್ಲಿ ಪದಕದ ಪಟ್ಟಿಯಲ್ಲಿ ಪೂನಿಯಾ ಹೆಸರು ದಾಖಲಾಗೋದು ಖಚಿತವಾಗಲಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...