
ಬಜಾಜ್ ಭಾರತದಲ್ಲಿ ಒಂದಲ್ಲ, ಎರಡು ಪಲ್ಸರ್ ಬೈಕುಗಳಿಗೆ ಹೊಚ್ಚಹೊಸ ಬಣ್ಣದ ಆಯ್ಕೆಯನ್ನು ತಂದಿದೆ. ಹೌದು, ಬಜಾಜ್ ಪಲ್ಸರ್ ಎಫ್250 ಮತ್ತು ಬಜಾಜ್ ಪಲ್ಸರ್ ಎನ್250 ಇದೀಗ ಹೊಸ ನೀಲಿ ಬಣ್ಣದಲ್ಲಿ ಲಭ್ಯವಿವೆ. ಹೊಸ ಬಣ್ಣದ ಆಯ್ಕೆಯಲ್ಲಿ ಎರಡು ಬೈಕ್‌ಗಳ ಕೆಲವು ಚಿತ್ರಗಳು ಡೀಲರ್ ಯಾರ್ಡ್‌ಗಳಿಂದ ವೈರಲ್ ಆಗಿವೆ.
ನಿಮಗೆ ತಿಳಿದಿರುವಂತೆ, ಭಾರತದಲ್ಲಿ ಈ ಎರಡು ಬಜಾಜ್ ಬೈಕ್‌ಗಳು ಈ ಹಿಂದೆ ಕೇವಲ ಎರಡು ಬಣ್ಣಗಳು ಅಂದರೆ ಗ್ರೇ ಹಾಗೂ ರೆಡ್ ಆಯ್ಕೆಗಳೊಂದಿಗೆ ಲಭ್ಯವಿದ್ದವು. ಈ ಸಾಲಿಗೆ ಈಗ ನೀಲಿ ಬಣ್ಣ ಸೇರ್ಪಡೆಯಾಗಿದ್ದು, ಈಗ ಈ ಸಂಖ್ಯೆ ಹೆಚ್ಚಾಗಿದೆ.
ಕೇದಾರನಾಥ ದರ್ಶನಕ್ಕೆ ತೆರಳುವವರಿಗೆ ಇಲ್ಲಿದೆ ಮುಖ್ಯ ಮಾಹಿತಿ
ಬಣ್ಣದ ಬದಲಾವಣೆಯೊಂದಿಗೆ ವಾಹನ ತಯಾರಕರು ಬೈಕ್‌ಗಳಿಗೆ ಅವುಗಳ ವಿನ್ಯಾಸ, ವೈಶಿಷ್ಟ್ಯಗಳು ಅಥವಾ ಬೆಲೆಗಳು ಸೇರಿದಂತೆ ಯಾವುದೇ ಬದಲಾವಣೆಗಳನ್ನು ಪರಿಚಯಿಸಿಲ್ಲ. ಇದರರ್ಥ ಹೊಸ ನೀಲಿ ಬಣ್ಣದ ಬಜಾಜ್ ಪಲ್ಸರ್ F250, 1.38 ಲಕ್ಷಕ್ಕೆ ಹಾಗೂ N250 1.4 ಲಕ್ಷಕ್ಕೆ ಮಾರಾಟ ಮಾಡಲಾಗುತ್ತಿದೆ.
ಬಜಾಜ್ ಪಲ್ಸರ್ F250 ಹಾಗೂ N250 ಬೈಕುಗಳಲ್ಲಿ 249ಸಿಸಿ ಸಿಂಗಲ್ ಸಿಲಿಂಡರ್ ಎಂಜಿನ್ ಅಳವಡಿಸಲಾಗಿದೆ. ಈ ಎಂಜಿನ್ 24.1 ಬಿಹೆಚ್‍ಪಿ ಪವರ್ ಮತ್ತು 21.5 ಎನ್ಎಂ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿದೆ. ಈ ಎಂಜಿನ್ 5-ಸ್ಪೀಡ್ ಗೇರ್‌ಬಾಕ್ಸ್ ಹಿಂದಿನ ವ್ಹೀಲ್ ಸ್ಲಿಪ್ ಮತ್ತು ಅಸಿಸ್ಟ್ ಕ್ಲಚ್ ಅನ್ನು ಒಳಗೊಂಡಿದೆ.
ಪಲ್ಸರ್ F250 ಹಾಗೂ N250 ಮಾದರಿಗಳು 250ಸಿಸಿ ವಿಭಾಗದಲ್ಲಿ ಅತ್ಯಂತ ಸೊಗಸಾದ ಮೋಟಾರ್‌ಸೈಕಲ್‌ಗಳ ಸಾಲಿನಲ್ಲಿವೆ. ಸೆಮಿ-ಫೇರ್ಡ್ ಮೋಟಾರ್‌ಸೈಕಲ್‌ಗಳು ನಿಮ್ಮ ಆಯ್ಕೆಯಾಗಿದ್ದರೆ ಈ ಎರಡು ಬೈಕುಗಳು ನಿಮ್ಮ ಪ್ರಿಫರೆನ್ಸ್ಗೆ ಅತ್ಯುತ್ತಮ ಆಯ್ಕೆಯಾಗಿದೆ ಎನ್ನಬಹುದು.