ಈಗ ರಸ್ತೆಗಳಲ್ಲಿ ವಿವಿಧ ಕಂಪನಿಗಳ ಬೈಕ್‌ಗಳು, ಸ್ಕೂಟರ್‌ಗಳನ್ನು ಕಾಣಬಹುದಾಗಿದೆ. ಒಂದೇ ಮಾಡೆಲ್ ದಶಕಗಳವರೆಗೆ ಜನರ ಮನಸ್ಸಿನಲ್ಲಿ ಮಿಂಚಿದ್ದು ಕೊನೆಯ ಬಾರಿ ಎಂದರೆ ಹೀರೋ ಹೊಂಡಾ ಕಂಪನಿಯ ಸ್ಪ್ಲೆಂಡರ್ ಬೈಕ್.
ಇದು ಮನೆಮನೆಯಲ್ಲೂ ಕಾಣಸಿಗುತ್ತಿತ್ತು. ವಿಶ್ವಾಸಾರ್ಹ, ಅಗ್ಗದ ಹಾಗೂ ನಿರ್ವಹಣೆ ರಹಿತ ಬೈಕ್ ಆಗಿತ್ತು. ಅದೇ ರೀತಿ ದಶಕದ ಹಿಂದೆ ಗೇರ್ ರಹಿತ ಸ್ಕೂಟರ್‌ಗಳಲ್ಲಿ ಮಿಂಚಿದ್ದು ’’ಹೋಂಡಾ ಆಕ್ಟಿವಾ’’.
ಇವೆಲ್ಲದರ ಮುನ್ನ ಮನೆಮಾತಾಗಿ ಜನರ ವಿಶ್ವಾಸ ಗಳಿಸಿದ್ದ ವಿಶ್ವದಲ್ಲೇ ಅತಿದೊಡ್ಡ ಪ್ರಮಾಣದಲ್ಲಿ ಉತ್ಪಾದನೆ ಕಂಡ ಸ್ಕೂಟರ್ ಎಂದರೆ ‘ಬಜಾಜ್ ಚೇತಕ್’.
ಭಾರತದಲ್ಲೇ 600 ಡೀಲರ್‌ಗಳನ್ನು 1990 ರಲ್ಲಿಈ ಸ್ಕೂಟರ್ ಹೊಂದಿತ್ತು. ಅಷ್ಟು ಬೃಹತ್ ಬೇಡಿಕೆ ಇತ್ತು.
ಇತ್ತೀಚೆಗೆ ಬಜಾಜ್ ಗ್ರೂಪ್‌ನ ಮಾಜಿ ಮುಖ್ಯಸ್ಥ, ದೇಶದ ಗಣ್ಯ ಉದ್ಯಮಿ ರಾಹುಲ್ ಬಜಾಜ್ ಮೃತರಾದರು. ಅವರ ಸಾಧನೆಗಳಲ್ಲಿ ಪ್ರಮುಖವಾದದ್ದು ಚೇತಕ್ ತಯಾರಿಕೆ. ಒಟ್ಟು 33 ವರ್ಷಗಳವರೆಗೆ ಚೇತಕ್ ಸ್ಕೂಟರ್‌ನ ವಿವಿಧ ಆವೃತ್ತಿಗಳ ಉತ್ಪಾದನೆ ನಡೆದಿದೆ.
16ನೇ ಶತಮಾನದಲ್ಲಿ ಮಹಾರಾಣ ಪ್ರತಾಪ್‌ಗೆ ಯುದ್ಧದಲ್ಲಿ ನೆರವಾದ ’ಚೇತಕ್’ ಎಂಬ ವಿಶ್ವಾಸಾರ್ಹ ಕುದುರೆಯ ಹೆಸರನ್ನು ಸ್ಕೂಟರ್‌ಗೆ ಇಡಲಾಗಿತ್ತು. ಚೇತಕ್‌ಗೆ ವಿಪರೀತ ಬೇಡಿಕೆ ಇದ್ದ ಕಾಲದಲ್ಲಿ ಕೂಡ ತಯಾರಿಕೆ ಹೆಚ್ಚಳಕ್ಕೆ ಸರಕಾರದಿಂದ ಅಗತ್ಯ ಪರವಾನಗಿ ಸಿಗಲು ವರ್ಷಗಳವರೆಗೆ ಕಾಯಬೇಕಿತ್ತು.
Pakistan: ಒಳ ಚರಂಡಿಯಲ್ಲಿ ಭಾರೀ ಸ್ಫೋಟ..! 10 ಮಂದಿ ಸಾವು, 13 ಮಂದಿಗೆ ಗಾಯ
ಹಾಗಿದ್ದೂ ಕೂಡ ಬಜಾಜ್ ಆಟೋ ಷೋರೂಮ್‌ಗಳಲ್ಲಿ ’ನೋ ವೇಟಿಂಗ್’ ಪೀರಿಯಡ್ ವ್ಯವಸ್ಥೆಯಲ್ಲಿ ಸ್ಕೂಟರ್ ಪೂರೈಕೆ ಮಾಡಿದ್ದು ರಾಹುಲ್ ಬಜಾಜ್ ಅವರ ಸಾಧನೆ. ಒಂದೇ ದಿನ 500 ಚೇತಕ್ ಸ್ಕೂಟರ್‌ಗಳನ್ನು ದೇಶದ ವಿವಿಧ ರಾಜ್ಯಗಳಲ್ಲಿ ಗ್ರಾಹಕರಿಗೆ ನೀಡಿದ್ದು ಇವತ್ತಿನವರೆಗಿನ ಅತ್ಯಂತ ದೊಡ್ಡ ದಾಖಲೆ ಎನಿಸಿದೆ.
ದಿಲ್ಲಿ, ಪಂಜಾಬ್ ಮತ್ತು ಆಂಧ್ರಪ್ರದೇಶದಲ್ಲಿ ಅತಿಹೆಚ್ಚು ಸಂಖ್ಯೆಯ ಚೇತಕ್ ಸ್ಕೂಟರ್ ಮಾರಾಟವಾಗಿತ್ತು.
ಒಂದು ತಿಂಗಳಿಗೆ 70 ಸಾವಿರ ಸ್ಕೂಟರ್‌ಗಳನ್ನು ಬಜಾಜ್ ಆಟೋ ಕಂಪನಿಯು ತಯಾರಿಸಿದ್ದು ಕೂಡ ದಾಖಲೆಯಾಗಿ ಉಳಿದಿದೆ. 1998ರ ವರೆಗೆ ಭಾರತದಲ್ಲಿ ಚೇತಕ್ ಸ್ಕೂಟರ್ ದ್ವಿಚಕ್ರ ವಾಹನ ಮಾರುಕಟ್ಟೆಯ ಅನಭಿಷಿಕ್ತ ದೊರೆಯಾಗಿ ಮೆರೆದಿತ್ತು.