
ಆರೋಪಿಯು ನಗರದಲ್ಲಿ ಪಾನಿಪೂರಿ ಮಾರಿ ಜೀವನ ಸಾಗಿಸುತ್ತಿದ್ದ. ಅಲ್ಲದೇ, ಪತಿ ಕುಡಿತದ ದಾಸನಾಗಿದ್ದರಿಂದಾಗಿ ಕುಟುಂಬ ನಿರ್ವಹಣೆಗಾಗಿ ಹಾಗೂ ಮಕ್ಕಳ ಶಾಲಾ ಖರ್ಚಿಗಾಗಿ ಪತ್ನಿ ಮದೀನಾ ಹೊಲಿಗೆ ಕೆಲಸ ಮಾಡಿಕೊಂಡಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳು ಇದ್ದಾರೆ.
ಆದರೆ, ತಡರಾತ್ರಿ ಕುಡಿದ ಅಮಲಿನಲ್ಲಿ ಬಂದ ಮೆಹಬೂಬ್ ಪತ್ನಿಯೊಂದಿಗೆ ಜಗಳ ಮಾಡಿದ್ದಾನೆ. ಜಗಳ ವಿಕೋಪಕ್ಕೆ ತಿರುಗುತ್ತಿದ್ದಂತೆ ರಾಡ್ ನಿಂದ ತಲೆಗೆ ಹೊಡೆದಿದ್ದಾನೆ. ಹೊಡೆತದ ತೀವ್ರತೆಗೆ ಕುಸಿದು ಬಿದ್ದ ಮದೀನಾ, ತೀವ್ರ ರಕ್ತಸ್ರಾವದಿಂದ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಮಕ್ಕಳ ಎದುರೇ ಪತ್ನಿಯನ್ನು ಕೊಲೆ ಮಾಡಿದ್ದು, ಮಕ್ಕಳು ತಾಯಿಯ ಶವ ಕಂಡು ದಿಗ್ಬ್ರಾಂತರಾಗಿದ್ದಾರೆ. ಬಳಿಕ ಮಕ್ಕಳನ್ನು ಕೋಣೆಯಲ್ಲಿ ಕೂಡಿ ಹಾಕಿದ್ದಾನೆ. ಆ ನಂತರ ನಿದ್ರೆಗೆ ಜಾರಿದ್ದಾನೆ. ಮೆಹೆಬೂಬ್ ನಿದ್ರೆಗೆ ಜಾರುತ್ತಿದ್ದಂತೆ ಮಕ್ಕಳು ಮನೆಯಿಂದ ಹೊರಗೆ ಬಂದು, ಅಕ್ಕ-ಪಕ್ಕದ ಮನೆಯವರಿಗೆ ನಡೆದ ವಿಷಯ ಹೇಳಿದ್ದಾರೆ. ಸದ್ಯ ಸ್ಥಳಕ್ಕೆ ಇಳಕಲ್ ನಗರ ಪೊಲೀಸರು ಭೇಟಿ ನೀಡಿ, ತನಿಖೆ ಕೈಗೊಂಡಿದ್ದಾರೆ. ಆರೋಪಿ ಪರಾರಿಯಾಗಿದ್ದು, ಆತನ ಬಂಧನಕ್ಕೆ ಬಲೆ ಬೀಸಿದ್ದಾರೆ.