alex Certify Viral Video | ಪ್ರಾಯೋಗಿಕವಾಗಿ ಲೈಂಗಿಕ ಶಿಕ್ಷಣ ಕಲಿಸಿ ಎಂದವನಿಗೆ ಖಡಕ್​ ಉತ್ತರ ನೀಡಿದ ಶಿಕ್ಷಕಿ; ಶಬ್ಬಾಸ್​ ಎಂದ ನೆಟ್ಟಿಗರು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

Viral Video | ಪ್ರಾಯೋಗಿಕವಾಗಿ ಲೈಂಗಿಕ ಶಿಕ್ಷಣ ಕಲಿಸಿ ಎಂದವನಿಗೆ ಖಡಕ್​ ಉತ್ತರ ನೀಡಿದ ಶಿಕ್ಷಕಿ; ಶಬ್ಬಾಸ್​ ಎಂದ ನೆಟ್ಟಿಗರು

article-image

NEET-UG ಆಕಾಂಕ್ಷಿಗಳಿಗೆ ತಮ್ಮ ಯುಟ್ಯೂಬ್​ ಚಾನೆಲ್​​ ಮೂಲಕ ಶಿಕ್ಷಣ ನೀಡುವ ರಕ್ಷಿತಾ ಸಿಂಗ್​​ ತಮ್ಮ ಜೀವಶಾಸ್ತ್ರದ ಪಾಠದ ವಿಡಿಯೋದಲ್ಲಿ ಅಸಭ್ಯವಾದ ಕಮೆಂಟ್​ ಮಾಡಿದವರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಸಂತಾನೋತ್ಪತ್ತಿ ಕ್ರಿಯೆಯ ಬಗ್ಗೆ ಆನ್​ಲೈನ್​ ಸೆಶನ್​ ತೆಗೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಕೆಲವರು ಕಮೆಂಟ್​ನಲ್ಲಿ ಸಂತಾನೋತ್ಪತ್ತಿ ಪ್ರಕ್ರಿಯೆ ಹೇಗೆ ಮಾಡುವುದು ಅಂತಾ ಪ್ರಾಕ್ಟಿಕಲ್​ ಆಗಿ ತೋರಿಸಿ ಅಂತಾ ಬರೆದಿದ್ದರು. ಈ ಅಸಭ್ಯ ಕಾಮೆಂಟ್​ಗೆ ರಕ್ಷಿತಾ ಸಿಂಗ್​ ಪ್ರತಿಕ್ರಿಯೆ ನೀಡಿದ್ದಾರೆ.

ನವನೀತ್​ ಎಂಬ ಯುಟ್ಯೂಬ್​ ಬಳಕೆದಾರರು ಮಕ್ಕಳು ಹೇಗೆ ಹುಟ್ಟುತ್ತಾರೆ..? ಪ್ರಾಯೋಗಿಕವಾಗಿ ತೋರಿಸಿ ಅಂತಾ ಕಮೆಂಟ್​ ಮಾಡಿದ್ದಾರೆ. ಇದಕ್ಕೆ ಸೂಕ್ತ ಉತ್ತರ ನೀಡಿದ ರಕ್ಷಿತಾ ಸಿಂಗ್​ ನಿಮ್ಮ ತಾಯಿಯಿಂದ ಕಲಿತುಕೊಳ್ಳಿ. ನಿಮ್ಮ ತಾಯಿ ಕೂಡ ಇದನ್ನೂ ಮಾಡಿದ್ದಾರೆ. ನಾನಂತೂ ಅವಿವಾಹಿತೆ. ಹೀಗಾಗಿ ನನಗೆ ಸಂತಾನೋತ್ಪತ್ತಿ ಕ್ರಿಯೆ ಬಗ್ಗೆ ಪ್ರ್ಯಾಕ್ಟಿಕಲ್​ ಅನುಭವ ಇಲ್ಲ. ಆದರೆ ನಿನ್ನ ತಾಯಿ ಈ ಅನುಭವ ಹೊಂದಿದ್ದಾರೆ. ಹೀಗಾಗಿ ಅವರಲ್ಲಿಯೇ ಕೇಳಿ ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಇನ್​ಸ್ಟಾಗ್ರಾಂನಲ್ಲಿಯೂ ಈ ವಿಚಾರವನ್ನು ಶೇರ್​ ಮಾಡಿರುವ ರಕ್ಷಿತಾ ಸಿಂಗ್​, ಮಹಿಳಾ ಶಿಕ್ಷಕಿಯರು ಎಂದಿಗೂ ತಮ್ಮ ಮೇಲೆ ಬರುವ ಲೈಂಗಿಕ ಕಿರುಕುಳಗಳಿಗೆ ಹೆದರಿಕೊಳ್ಳಬಾರದು. ಆತ್ಮೀಯ ಶಿಕ್ಷಕಿಯರೇ ಎಂದಿಗೂ ಹಿಂಸೆಗೆ ಒಳಗಾಗಬೇಡಿ ಎಂದು ಕಿವಿಮಾತು ನುಡಿದಿದ್ದಾರೆ.

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...