alex Certify ಮಳೆಯಿಂದ ಮನೆ ಗೋಡೆ ಕುಸಿದು ನವಜಾತ ಶಿಶು ಸೇರಿ ಇಬ್ಬರ ಸಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಳೆಯಿಂದ ಮನೆ ಗೋಡೆ ಕುಸಿದು ನವಜಾತ ಶಿಶು ಸೇರಿ ಇಬ್ಬರ ಸಾವು

ಕೊಪ್ಪಳ: ನಿರಂತರ ಮಳೆಯಿಂದಾಗಿ ತೇವಗೊಂಡಿದ್ದ ಮಣ್ಣಿನ ಗೋಡೆ ಕುಸಿದು ಮನೆಯಲ್ಲಿದ್ದ ಇಬ್ಬರು ಮೃತಪಟ್ಟಿದ್ದಾರೆ.

ಫಕೀರಮ್ಮ(60) ಹಾಗೂ 24 ದಿನದ ನವಜಾತ ಶಿಶು ಮೃತಪಟ್ಟವರು. ಕೊಪ್ಪಳ ಜಿಲ್ಲೆ ಕನಕಗಿರಿ ತಾಲೂಕಿನ ಜೀರಾಳ ಗ್ರಾಮದಲ್ಲಿ ಮಂಗಳವಾರ ಘಟನೆ ನಡೆದಿದೆ. ಬಾಣಂತಿ ಕನಕಮ್ಮ ಅವರಿಗೆ ಕಾಲು ಮುರಿದಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

ಅವರ ಮಗು ಅಜ್ಜಿಯೊಂದಿಗೆ ಮಲಗಿದ್ದಾಗ ಮಳೆಯಿಂದ ತೇವಗೊಂಡಿದ್ದ ಮನೆಯ ಗೋಡೆ ಕುಸಿದು ದುರಂತ ಸಂಭವಿಸಿದೆ. ಕನಕಮ್ಮ ಅವರ ಪತಿ ಮನೆಯ ಹೊರಗೆ ಮಲಗಿದ್ದರಿಂದ ಯಾವುದೇ ಅಪಾಯವಾಗಿಲ್ಲ. ಫಕೀರಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ನವಜಾತ ಶಿಶು ಆಸ್ಪತ್ರೆಗೆ ಕರೆದುಯುವ ಮಾರ್ಗ ಮಧ್ಯೆ ಮೃತಪಟ್ಟಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...