alex Certify ಕಟ್ಟಡ ಕುಸಿದ 30 ಗಂಟೆಗಳ ನಂತರವೂ ಜೀವಂತವಾಗಿತ್ತು‌ ಪುಟ್ಟ ಮಗು…! ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಟ್ಟಡ ಕುಸಿದ 30 ಗಂಟೆಗಳ ನಂತರವೂ ಜೀವಂತವಾಗಿತ್ತು‌ ಪುಟ್ಟ ಮಗು…! ರಕ್ಷಣಾ ಕಾರ್ಯಾಚರಣೆಯ ವಿಡಿಯೋ ವೈರಲ್

ಕಳೆದ ವಾರ ಜೋರ್ಡಾನ್​ ರಾಜಧಾನಿಯಲ್ಲಿ ನಾಲ್ಕು ಅಂತಸ್ತಿನ ಕಟ್ಟಡ ಕುಸಿದು ಬಿದ್ದ ಘಟನೆಯಲ್ಲಿ 14 ಜನರು ಸಾವನ್ನಪ್ಪಿದ್ದರು. ಈ ನಡುವೆ ಪವಾಡ ಸದೃಶ್ಯವಾಗಿ ಮಲಕ್​ ಎಂಬ ನಾಲ್ಕು ತಿಂಗಳ ಮಗುವನ್ನು ರಕ್ಷಿಸಲಾಗಿದೆ.

30 ಗಂಟೆಗಳ ಕಠಿಣ ರಕ್ಷಣಾ ಕಾರ್ಯಾಚರಣೆಯ ನಂತರ ಶಿಶುವನ್ನು ಅವಶೇಷಗಳಡಿಯಿಂದ ಜೀವಂತವಾಗಿ ಹೊರತೆಗೆಯಲಾಯಿತು. ವಸತಿ ಕಟ್ಟಡವು ಅಮ್ಮನ್​ನ ಜಬಲ್​ ಅಲ್​-ವೈಬ್ಡೆಯಲ್ಲಿ ಇದೆ, ಅವಶೇಷಗಳಡಿ 25 ಜನರು ಸಿಕ್ಕಿಬಿದ್ದಿದ್ದಾರೆ ಎಂದು ಹೇಳಲಾದ ನಂತರ ದೊಡ್ಡ ಮಟ್ಟದ ರಕ್ಷಣಾ ಕಾರ್ಯ ಪ್ರಾರಂಭಗೊಂಡಿತು.

ಜೋರ್ಡಾನ್​ ಸಿವಿಲ್​ ಡಿಫೆನ್ಸ್​ ಟ್ವಿಟರ್​ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದು, ಮಲಕ್​ ಅನ್ನು ಸುರಕ್ಷಿತವಾಗಿ ಹೊರತೆಗೆಯಲು ಸಿಬ್ಬಂದಿ ಸದಸ್ಯರು ರಾಶಿಯಲ್ಲಿನ ಸಣ್ಣ ರಂಧ್ರದ ಮೂಲಕ ತಲುಪುತ್ತಿರುವುದನ್ನು ದೃಶ್ಯಾವಳಿ ತೋರಿಸುತ್ತದೆ.

ಮಗುವಿಗೆ ಸಣ್ಣಪುಟ್ಟ ಗಾಯಗಳಾಗಿವೆ. ರಕ್ಷಿಸಿದ ನಂತರ ಆಕೆಯನ್ನು ಆಸ್ಪತ್ರೆಗೆ ಸಾಗಿಸಲಾಯಿತು. ಬಳಿಕ ಇದನ್ನು ನೋಡಿದ ನೆಟ್ಟಿಗರು ಆ ಮಗು ‘ಭರವಸೆ ಮತ್ತು ಐಕಾನ್​’ ಎಂದು ಕರೆಯುತ್ತಿದ್ದಾರೆ.

ಸುಗಂಧ ದ್ರವ್ಯ ಮತ್ತು ಮೇಕಪ್​ ಮಾರಾಟ ಮಾಡುವ ಆಕೆಯ ತಾಯಿ ತನ್ನ ಮಗಳನ್ನು ಕಟ್ಟಡದ ನೆಲಮಾಳಿಗೆಯಲ್ಲಿ ವಾಸಿಸುತ್ತಿದ್ದ ಸ್ನೇಹಿತನೊಂದಿಗೆ ಬಿಟ್ಟು ಹೋಗಿದ್ದಳು, ಇದರಿಂದಾಗಿ ಆಕೆ ರಕ್ಷಣಾ ಸಿಬ್ಬಂದಿಗೆ ಸಂದೇಶ ತಲುಪಿಸಿದ್ದಳು.

ನಾಲ್ಕು ಅಂತಸ್ತಿನ ಕಟ್ಟಡದ ಅವಶೇಷಗಳಡಿಯಿಂದ ಮಗು ಸುರಕ್ಷಿತವಾಗಿ ಹೊರಬಂದಿರುವುದು ಪವಾಡ ಎಂದು ವೆೈದ್ಯರು ಹೇಳಿದ್ದಾರೆ.

ಅವಳು ಜೀವಂತವಾಗಿದ್ದಾಳೆ ಎಂಬ ಭಾವನೆ ನನಗೆ ಇತ್ತು, ಅವಳು ನಮಗಾಗಿ ಕಾಯುತ್ತಿದ್ದಾಳೆ ಎಂದು ನನ್ನ ಪತಿ ನನಗೆ ಭರವಸೆ ನೀಡಿದ್ದರು ಎಂದು ಮಗುವಿನ ತಾಯಿ ಹೇಳಿದ್ದಾರೆ.

ಜೋರ್ಡಾನ್​ನ ಸ್ಥಳೀಯ ಸುದ್ದಿ ಸಂಸ್ಥೆ ಪ್ರಕಾರ, ಈ ಪ್ರಕರಣದಲ್ಲಿ ಪಬ್ಲಿಕ್​ ಪ್ರಾಸಿಕ್ಯೂಟರ್​ ಹಸನ್​ ಅಲ್​-ಅಬ್ದಲ್ಲಾತ್​ ಮೂವರನ್ನು ಬಂಧಿಸಲು ಆದೇಶಿಸಿದ್ದಾರೆ. ಅವರು ವಸತಿ ಕಟ್ಟಡದ ವ್ಯವಸ್ಥಾಪಕರು ಮತ್ತು ನಿರ್ವಹಣೆ ಕೆಲಸದಲ್ಲಿ ತೊಡಗಿರುವ ಇತರ ಇಬ್ಬರು ವ್ಯಕ್ತಿಗಳು ಎಂದು ಹೇಳಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...