alex Certify ಆಪ್ ಗೆಲುವನ್ನು ಸಂಭ್ರಮಿಸಲು ಮರಳಿದ ʼಬೇಬಿ ಕೇಜ್ರಿವಾಲ್ʼ ; ಭಗವಂತ್ ಮಾನ್ ಅವ್ರಂತೆ ತಯಾರಾದ ಪುಟಾಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಪ್ ಗೆಲುವನ್ನು ಸಂಭ್ರಮಿಸಲು ಮರಳಿದ ʼಬೇಬಿ ಕೇಜ್ರಿವಾಲ್ʼ ; ಭಗವಂತ್ ಮಾನ್ ಅವ್ರಂತೆ ತಯಾರಾದ ಪುಟಾಣಿ

2020ರ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ಅರವಿಂದ್ ಕೇಜ್ರಿವಾಲ್ ಅವರ ಪ್ರಮಾಣವಚನ ಸಮಾರಂಭದಲ್ಲಿ ಬೇಬಿ ಕೇಜ್ರಿವಾಲ್ ಸಖತ್ ಸುದ್ದಿಯಾಗಿದ್ದರು. ಥೇಟ್ ಅರವಿಂದ್ ಕೇಜ್ರಿವಾಲನಂತೆ ಧಿರಿಸು ಧರಿಸಿದ್ದ ಪುಟಾಣಿ ಹುಡುಗ ಸಿಕ್ಕಾಪಟ್ಟೆ ವೈರಲ್ ಆಗಿದ್ದರು. ಈಗ ಪಂಜಾಬ್ ವಿಧಾನಸಭೆ ಚುನಾವಣೆಯಲ್ಲಿ ಆಪ್ ಗೆಲುವಿನ ನಗೆ ಬೀರಿದ್ದು, ಈ ಸಂಭ್ರಮದಲ್ಲಿ ಬೇಬಿ ಕೇಜ್ರಿವಾಲ್ ಕೂಡ ಭಾಗಿಯಾಗಿದ್ದಾರೆ.

‘ಅತ್ಯಾಚಾರ’ ಹೆಚ್ಚಳ ಕುರಿತು ಕೇಳಿದ ಪ್ರಶ್ನೆಗೆ ವಿಚಿತ್ರ ಉತ್ತರ ನೀಡಿದ ಕಾಂಗ್ರೆಸ್ ಸಚಿವ…!

ಇಂದು ಈ ಪುಟಾಣಿ ಭಗವಂತ್ ಮಾನ್ ಅವರಂತೆ ತಯಾರಾಗಿ ಆಮ್ ಆದ್ಮಿ ಪಕ್ಷದ ಕಚೇರಿಗೆ ಆಗಮಿಸಿದ್ದಾನೆ. ಹಳದಿ ಟರ್ಬನ್, ಮರೂನ್ ಸ್ವೆಟರ್, ಕಪ್ಪು ಮಪ್ಲರ್ ಧರಿಸಿ,‌ ಮೀಸೆ ಅಂಟಿಸಿಕೊಂಡಿರುವ ಪುಟಾಣಿ ವಿಕ್ಟರಿ ಚಿಹ್ನೆ ತೋರಿಸುತ್ತಾ ಫೋಟೊಗೆ ಪೋಸ್ ನೀಡಿದ್ದಾನೆ.

BIG NEWS: ವಿಪಕ್ಷವನ್ನು ಜನರು ಧೂಳಿಪಟ ಮಾಡಿದ್ದಾರೆ: ಚುನಾವಣಾ ಫಲಿತಾಂಶ ರಾಜ್ಯದ ಮೇಲೂ ಸಕಾರಾತ್ಮಕ ಪರಿಣಾಮ ಬೀರಲಿದೆ ಎಂದ ಸಿಎಂ ಬೊಮ್ಮಾಯಿ

ಆಮ್ ಆದ್ಮಿ ಪಕ್ಷ ಕೂಡ ಈ ಪುಟಾಣಿಯ ಚಿತ್ರ ಹಂಚಿಕೊಂಡಿದೆ. ಈತನನ್ನು ಪಕ್ಷದ ಪಾಲಿನ ಗುಡ್ ಲಕ್ ಎಂದು ಕರೆದಿದೆ. ಭಗವಂತ್ ಮಾನ್ ಅವರ ಭಾವಚಿತ್ರದ ಮುಂದೆ ಈ ಪುಟಾಣಿ ಫೋಟೊಗೆ ಪೋಸ್ ನೀಡಿದ್ದಾನೆ. 2020ರಲ್ಲಿ ಕೇಜ್ರಿವಾಲ್ ಅವ್ರಂತೆ ತಯಾರಾಗಿ ಎಲ್ಲರ ಗಮನ ಸೆಳೆದಿದ್ದ ಈತನೊಂದಿಗೆ ಭಗವಂತ್ ಮಾನ್ ಮಾತನಾಡಿ, ಕೈಕುಲುಕಿಸಿ, ಫೋಟೊ ಕ್ಲಿಕ್ಕಿಸಿಕೊಂಡಿದ್ದರು ಎಂಬುದು ಗಮನಾರ್ಹ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...