alex Certify ತನ್ನನ್ನು ರಕ್ಷಿಸಿದ ಅರಣ್ಯಾಧಿಕಾರಿಯನ್ನು ಆಲಿಂಗಿಸಿಕೊಂಡ ಮರಿ ಆನೆ…! ಮನಕಲಕುತ್ತೆ ಈ ಹೃದಯಸ್ಪರ್ಶಿ ಫೋಟೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತನ್ನನ್ನು ರಕ್ಷಿಸಿದ ಅರಣ್ಯಾಧಿಕಾರಿಯನ್ನು ಆಲಿಂಗಿಸಿಕೊಂಡ ಮರಿ ಆನೆ…! ಮನಕಲಕುತ್ತೆ ಈ ಹೃದಯಸ್ಪರ್ಶಿ ಫೋಟೋ

ತನ್ನನ್ನು ರಕ್ಷಿಸಿದ ಅರಣ್ಯಾಧಿಕಾರಿಯನ್ನು ಅಪ್ಪಿ ಆಲಿಂಗಿಸಿದ ಮರಿ ಆನೆಯೊಂದರ ಚಿತ್ರವೊಂದು ನೆಟ್ಟಿಗರ ಹೃದಯ ಕರಗಿಸಿದೆ.

ಭಾರತೀಯ ಅರಣ್ಯ ಸೇವಾಧಿಕಾರಿ ಪ್ರವೀಣ್ ಕಸ್ವಾನ್ ಶೇರ್‌ ಮಾಡಿದ ಈ ಚಿತ್ರದಲ್ಲಿ, ತಮಿಳುನಾಡಿನ ಅರಣ್ಯಾಧಿಕಾರಿಯೊಬ್ಬರನ್ನು ತನ್ನ ಸೊಂಡಿಲಿನಿಂದ ಆನೆ ಮರಿ ಅಪ್ಪಿಕೊಂಡಿರುವುದನ್ನು ನೋಡಬಹುದಾಗಿದೆ.

ಸಿಂದೂರ್ ಖೇಲಾ ಆಡಿದ ನಟಿ ಶರ್ಬಾನಿ ಮುಖರ್ಜಿ: ಸ್ನೇಹಿತರು ಮತ್ತು ಕುಟುಂಬದೊಂದಿಗೆ ದುರ್ಗಾ ಪೂಜೆ ಆಚರಣೆ

“ಪ್ರೀತಿಗೆ ಭಾಷೆಯಿಲ್ಲ. ಆನೆ ಮರಿಯು ಅರಣ್ಯಾಧಿಕಾರಿಯೊಬ್ಬರನ್ನು ಅಪ್ಪಿಕೊಳ್ಳುತ್ತಿದೆ. ಈ ತಂಡವು ಆನೆ ಮರಿಯನ್ನು ರಕ್ಷಿಸಿ ಅದರ ಅಮ್ಮನೊಂದಿಗೆ ಮರಳಿ ಸೇರಿಸಿದೆ,” ಎಂದು ಪ್ರವೀಣ್ ಕಸ್ವಾನ್ ಟ್ವೀಟ್ ಮಾಡಿದ್ದಾರೆ.

ತನ್ನ ತಾಯಿಯನ್ನು ಕೂಡಿಕೊಳ್ಳಲು ಅರಣ್ಯಾಧಿಕಾರಿಗಳೊಂದಿಗೆ ನಡೆದು ಹೋಗುತ್ತಿದ್ದ ಆನೆ ಮರಿಯ ವಿಡಿಯೋವನ್ನು ಐಎಫ್‌ಎಸ್‌ನ ಮತ್ತೊಬ್ಬ ಅಧಿಕಾರಿ ಸುಧಾ ರಾಮೆನ್ ಶೇರ್‌ ಮಾಡಿದ್ದರು. ಗಾಯಗೊಂಡು ಏಕಾಂಗಿಯಾಗಿ ಕಾಣಿಸಿಕೊಂಡ ಆನೆ ಮರಿಯನ್ನು ತಮಿಳುನಾಡು ಅರಣ್ಯ ಇಲಾಖೆಯ ತಂಡವೊಂದು ಅದರ ತಾಯಿಯತ್ತ ಸೇರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...