alex Certify ದುಷ್ಟ ಶಕ್ತಿಗಳಿಂದ ಮುಕ್ತಿ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ತಂದೆ-ಮಗನಿಂದ ನಿರಂತರ ಅತ್ಯಾಚಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ದುಷ್ಟ ಶಕ್ತಿಗಳಿಂದ ಮುಕ್ತಿ ಕೊಡಿಸುವ ನೆಪದಲ್ಲಿ ಮಹಿಳೆ ಮೇಲೆ ತಂದೆ-ಮಗನಿಂದ ನಿರಂತರ ಅತ್ಯಾಚಾರ..!

ದುಷ್ಟಶಕ್ತಿಗಳಿಂದ ಮುಕ್ತಿ ಕೊಡಿಸುತ್ತೇನೆ ಎಂದು ನಂಬಿಸಿ ದಶಕಕ್ಕೂ ಅಧಿಕ ಕಾಲ ಮಹಿಳೆ ಮೇಲೆ ಅತ್ಯಾಚಾರ ಎಸಗುತ್ತಿದ್ದ ಬಾಬಾನನ್ನು ಪೊಲೀಸರು ಬಂಧಿಸಿದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ.

ಚಂದ್ರಾಯನಗುಟ್ಟ ಪೊಲೀಸರು 52 ವರ್ಷದ ಸೈಯದ್​​ ಹಸನ್​ ಅಸ್ಕಾರಿ ಎಂಬಾತನನ್ನು ಬಂಧಿಸಿದ್ದಾರೆ. 35ರ ಹರೆಯದ ಮಹಿಳೆಯ ಮೇಲೆ ಈತನ ಪುತ್ರ ಸೈಯದ್​ ಅಫ್ರೋಜ್​ ಕೂಡ ಅನೇಕ ಬಾರಿ ಅತ್ಯಾಚಾರ ಎಸಗಿದ್ದು ಈತನನ್ನೂ ಪೊಲೀಸರು ಬಂಧಿಸಿದ್ದಾರೆ.

ಮಾಟಮಂತ್ರದ ಹೆಸರಿನಲ್ಲಿ ಮಹಿಳೆಯ ಮೇಲೆ ಸೈಯದ್​ ಹಸನ್​ ಅತ್ಯಾಚಾರ ಎಸಗುತ್ತಿದ್ದರೂ ಸಹ ಆತನ ಕಪಟ ಬುದ್ಧಿ ಸಂತ್ರಸ್ತೆಗೆ ತಿಳಿದಿರಲಿಲ್ಲ. ಆದರೆ ಯಾವತ್ತು ಆತ ಸಂತ್ರಸ್ತೆಯ ಕಿರಿಯ ಸಹೋದರಿ 23 ವರ್ಷದ ಯುವತಿಯ ಮೇಲೂ ಅತ್ಯಾಚಾರ ಎಸಗಿದ್ದಾನೆ ಎಂದು ತಿಳಿಯಿತೋ ಆಕೆಗೆ ಆಗ ವಾಸ್ತವದ ಅರಿವಾಗಿದೆ. ಇದಾದ ಬಳಿಕ ಪೊಲೀಸ್​ ಠಾಣೆಗೆ ತೆರಳಿದ ಮಹಿಳೆ ತಂದೆ ಹಾಗೂ ಮಗನ ವಿರುದ್ಧ ದೂರು ದಾಖಲಿಸಿದ್ದಾರೆ.

ಸಂತ್ರಸ್ತೆಯ ತಾಯಿ ದೀರ್ಘಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಸಂದರ್ಭದಲ್ಲಿ ತಾಯಿಯ ಸಹೋದರ ಸೈಯದ್​ ಹಸನ್​ ಪರಿಚಯ ಮಾಡಿಸಿಕೊಟ್ಟಿದ್ದ. ಅಸ್ಕರ್​ ಮಾಟಮಾಂತ್ರದ ಮೂಲಕವೇ ತಾಯಿಯನ್ನು ಗುಣಪಡಿಸಿದ್ದಾಗಿ ಎಲ್ಲರನ್ನೂ ನಂಬಿಸಿದ್ದ. ಇದಾದ ಬಳಿಕ ಸೈಯದ್​ ಮೇಲೆ ನಂಬಿಕೆಯಿಡಲು ಆರಂಭಿಸಿದ ಮಹಿಳೆಯು ಪ್ರತಿಯೊಂದಕ್ಕೂ ಆತನ ಸಲಹೆ ಪಡೆಯುತ್ತಿದ್ದಳು.

ಸೈಯದ್​ ಮಹಿಳೆಯ ಬಳಿ ನಿನ್ನ ಪತಿ ದುಷ್ಟ ಶಕ್ತಿಯನ್ನು ಹೊಂದಿದ್ದಾನೆ ಎಂದು ಹೇಳಿದ್ದಕ್ಕೆ ಆತನಿಗೆ ವಿಚ್ಛೇದನ ನೀಡಿದ್ದಳು. ಮನೆಯಲ್ಲಿ ದುಷ್ಟಶಕ್ತಿಯಿದೆ ಅದನ್ನು ಮಾರು ಎಂದು ಹೇಳಿದ್ದನು. ಈತನ ಮಾತನ್ನು ನಂಬಿ ಮಹಿಳೆಯು ಮನೆಯನ್ನೂ ಮಾರಾಟ ಮಾಡಿದ್ದಳು. ಮನೆ ಮಾರಾಟದಿಂದ ಬಂದ ಹಣದಲ್ಲಿ ಹೆಚ್ಚಿನ ಪಾಲನ್ನು ಸೈಯದ್​ ಇಟ್ಟುಕೊಂಡಿದ್ದ. ಇದಾದ ಬಳಿಕ ಆಕೆಯ ಮೇಲೆ ಸಂಮೋಹಿನಿ ವಿದ್ಯೆ ಪ್ರಯೋಗ ಮಾಡಿ ಅನೇಕ ಬಾರಿ ಅತ್ಯಾಚಾರ ಎಸಗಿದ್ದನು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...