alex Certify B‌IG NEWS: ಪಾರ್ನ್​ ರಾಕೆಟ್​ ದಂಧೆಯಲ್ಲಿ ನ್ಯಾನ್ಸಿ ಬಾಬಿ ಖ್ಯಾತಿಯ ನಂದಿತಾ ದತ್ತಾ ಅರೆಸ್ಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

B‌IG NEWS: ಪಾರ್ನ್​ ರಾಕೆಟ್​ ದಂಧೆಯಲ್ಲಿ ನ್ಯಾನ್ಸಿ ಬಾಬಿ ಖ್ಯಾತಿಯ ನಂದಿತಾ ದತ್ತಾ ಅರೆಸ್ಟ್

ಪಾರ್ನ್​ ರಾಕೆಟ್​ ದಂಧೆಯಲ್ಲಿ ಕೊಲ್ಕತ್ತಾ ಪೊಲೀಸರು ಭೇದಿಸಿದ್ದು ಪ್ರಕರಣ ಸಂಬಂಧ ಮಾಡೆಲ್​, ನಟಿ ಹಾಗೂ ಶೂಟಿಂಗ್​ ಸಂಯೋಜಕಿಯನ್ನು ಬಂಧಿಸಿದ್ದಾರೆ. ಬಂಧಿತ ನಟಿಯನ್ನು 30 ವರ್ಷದ ನಂದಿತಾ ದತ್ತಾ ಎಂದು ಗುರುತಿಸಲಾಗಿದೆ. ಇವರು ಅಡಲ್ಟ್​ ವೆಬ್​ ಸರಣಿ ಹಾಗೂ ಶಾರ್ಟ್ ವಿಡಿಯೋಗಳಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿದೆ.

ಇನ್ನೊರ್ವ ಬಂಧಿತನನ್ನು 39 ವರ್ಷದ ಮೈನಕಲ್​ ಘೋಷ್​ ಎಂದು ಗುರುತಿಸಲಾಗಿದೆ. ಇಬ್ಬರು ಯುವ ಮಾಡೆಲ್​ಗಳು ನೀಡಿದ ದೂರನ್ನ ಆಧರಿಸಿ ಇವರಿಬ್ಬರನ್ನು ಬಂಧಿಸಲಾಗಿದೆ.

ದೂರದಾರ ಮಾಡೆಲ್​ಗಳಲ್ಲಿ ಓರ್ವ ಯುವತಿ ನಂದಿತಾ ದತ್ತಾ ಹಾಗೂ ಮೈನಕ್​ ಘೋಷ್​ ತನ್ನ ಬಳಿ ಬೆತ್ತಲೆ ವಿಡಿಯೋದಲ್ಲಿ ಕಾಣಿಸಿಕೊಳ್ಳುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿದ್ದಾರೆ. ಇನ್ನೋರ್ವ ದೂರುದಾರ ಮಾಡೆಲ್​​ ಕೂಡ ಇದೇ ತಂಡ ನನ್ನ ಬಳಿ ನ್ಯೂ ಟೌನ್​ ಹೋಟೆಲ್​ನಲ್ಲಿ ಬಲವಂತದಿಂದ ಅಡಲ್ಟ್ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರನ್ನು ಆಧರಿಸಿದ ಪೊಲೀಸರು ದಮ್​ ದಮ್​ ಹಾಗೂ ನಕ್ಟಲಾದ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.

ದತ್ತಾ ಹಾಗೂ ಘೋಷ್​​ ಯುವ ಮಾಡೆಲ್​ಗಳನ್ನು ಬೆದರಿಸಿ ಅಥವಾ ಮುಂದಿನ ದಿನಗಳಲ್ಲಿ ಒಳ್ಳೊಳ್ಳೆ ವೆಬ್​ ಸರಣಿಯಲ್ಲಿ ಅವಕಾಶ ನೀಡೋದಾಗಿ ನಂಬಿಸಿ ಅಶ್ಲೀಲ ವಿಡಿಯೋದಲ್ಲಿ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಪೊಲೀಸರು ದತ್ತಾ ಹಾಗೂ ಘೋಷ್​ರನ್ನು ಒಂದು ವಾರಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ದತ್ತಾ ಹಾಗೂ ಘೋಷ್​ ವಿರುದ್ಧ ಸೆಕ್ಷನ್​ 354 ಬಿ, 354 ಸಿ, 500,509,370,,417 ಹಾಗೂ 469ರಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...