ಪಾರ್ನ್ ರಾಕೆಟ್ ದಂಧೆಯಲ್ಲಿ ಕೊಲ್ಕತ್ತಾ ಪೊಲೀಸರು ಭೇದಿಸಿದ್ದು ಪ್ರಕರಣ ಸಂಬಂಧ ಮಾಡೆಲ್, ನಟಿ ಹಾಗೂ ಶೂಟಿಂಗ್ ಸಂಯೋಜಕಿಯನ್ನು ಬಂಧಿಸಿದ್ದಾರೆ. ಬಂಧಿತ ನಟಿಯನ್ನು 30 ವರ್ಷದ ನಂದಿತಾ ದತ್ತಾ ಎಂದು ಗುರುತಿಸಲಾಗಿದೆ. ಇವರು ಅಡಲ್ಟ್ ವೆಬ್ ಸರಣಿ ಹಾಗೂ ಶಾರ್ಟ್ ವಿಡಿಯೋಗಳಲ್ಲಿ ಕೆಲಸ ಮಾಡಿದ್ದರು ಎನ್ನಲಾಗಿದೆ.
ಇನ್ನೊರ್ವ ಬಂಧಿತನನ್ನು 39 ವರ್ಷದ ಮೈನಕಲ್ ಘೋಷ್ ಎಂದು ಗುರುತಿಸಲಾಗಿದೆ. ಇಬ್ಬರು ಯುವ ಮಾಡೆಲ್ಗಳು ನೀಡಿದ ದೂರನ್ನ ಆಧರಿಸಿ ಇವರಿಬ್ಬರನ್ನು ಬಂಧಿಸಲಾಗಿದೆ.
ದೂರದಾರ ಮಾಡೆಲ್ಗಳಲ್ಲಿ ಓರ್ವ ಯುವತಿ ನಂದಿತಾ ದತ್ತಾ ಹಾಗೂ ಮೈನಕ್ ಘೋಷ್ ತನ್ನ ಬಳಿ ಬೆತ್ತಲೆ ವಿಡಿಯೋದಲ್ಲಿ ಕಾಣಿಸಿಕೊಳ್ಳುವಂತೆ ಒತ್ತಾಯಿಸಿದ್ದರು ಎಂದು ಆರೋಪಿಸಿದ್ದಾರೆ. ಇನ್ನೋರ್ವ ದೂರುದಾರ ಮಾಡೆಲ್ ಕೂಡ ಇದೇ ತಂಡ ನನ್ನ ಬಳಿ ನ್ಯೂ ಟೌನ್ ಹೋಟೆಲ್ನಲ್ಲಿ ಬಲವಂತದಿಂದ ಅಡಲ್ಟ್ ವಿಡಿಯೋ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ದೂರನ್ನು ಆಧರಿಸಿದ ಪೊಲೀಸರು ದಮ್ ದಮ್ ಹಾಗೂ ನಕ್ಟಲಾದ ಅವರ ನಿವಾಸದಲ್ಲಿ ಬಂಧಿಸಿದ್ದಾರೆ.
ದತ್ತಾ ಹಾಗೂ ಘೋಷ್ ಯುವ ಮಾಡೆಲ್ಗಳನ್ನು ಬೆದರಿಸಿ ಅಥವಾ ಮುಂದಿನ ದಿನಗಳಲ್ಲಿ ಒಳ್ಳೊಳ್ಳೆ ವೆಬ್ ಸರಣಿಯಲ್ಲಿ ಅವಕಾಶ ನೀಡೋದಾಗಿ ನಂಬಿಸಿ ಅಶ್ಲೀಲ ವಿಡಿಯೋದಲ್ಲಿ ಬಳಸಿಕೊಳ್ಳುತ್ತಿದ್ದರು ಎನ್ನಲಾಗಿದೆ. ಪೊಲೀಸರು ದತ್ತಾ ಹಾಗೂ ಘೋಷ್ರನ್ನು ಒಂದು ವಾರಗಳ ಕಾಲ ಕಸ್ಟಡಿಗೆ ತೆಗೆದುಕೊಂಡಿದ್ದಾರೆ. ದತ್ತಾ ಹಾಗೂ ಘೋಷ್ ವಿರುದ್ಧ ಸೆಕ್ಷನ್ 354 ಬಿ, 354 ಸಿ, 500,509,370,,417 ಹಾಗೂ 469ರಅಡಿಯಲ್ಲಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.