alex Certify ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ ಅಂತಾರಾಷ್ಟ್ರೀಯ ಪುರಸ್ಕಾರದ ಕಲಾವಿದ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ ಅಂತಾರಾಷ್ಟ್ರೀಯ ಪುರಸ್ಕಾರದ ಕಲಾವಿದ

Award Winning Papier-Mâché Artisan Now An Auto Driverಕಾಶ್ಮೀರದ ಪ್ರಶಸ್ತಿ ವಿಜೇತ ಕಲಾವಿದರೊಬ್ಬರು ಹಣಕಾಸಿನ ತೊಂದರೆಯಿಂದ ಆಟೋ ರಿಕ್ಷಾ ಓಡಿಸಿ ಜೀವನ ಸಾಗಿಸುತ್ತಿದ್ದಾರೆ. ಪೇಪರ್ ನಿಂದ ವಿವಿಧ ರೀತಿಯ ಕಲಾಕೃತಿಗಳನ್ನು ಮಾಡುವ ಕಲಾವಿದ ಸೈಯದ್ ಐಜಾಜ್, ರಾಜ್ಯ ಕರಕುಶಲ ಪ್ರಶಸ್ತಿಗಳು ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಗೆದ್ದಿದ್ದಾರೆ. ಬಿಬಿಸಿ ಸೇರಿದಂತೆ ವಿವಿಧ ಅಂತಾರಾಷ್ಟ್ರೀಯ ನಿಯತಕಾಲಿಕೆಗಳಲ್ಲಿ ಕಾಣಿಸಿಕೊಂಡಿದ್ದರೂ, ಅತಿಥಿ ಮತ್ತು ತರಬೇತುದಾರರಾಗಿ ಅನೇಕ ದೇಶಗಳಿಗೆ ಭೇಟಿ ನೀಡಿದರೂ, ಜೀವನಕ್ಕಾಗಿ ಹೆಣಗಾಡುತ್ತಿದ್ದಾರೆ. ಇವರ ಹೃದಯವಿದ್ರಾವಕ ಕಥೆಯನ್ನು ಸರಣಿ ಟ್ವೀಟ್‌ಗಳಲ್ಲಿ ಹಂಚಿಕೊಳ್ಳಲಾಗಿದೆ.

ಕಲಾವಿದ ಸೈಯದ್ ಐಜಾಜ್ ಕಲೆಯನ್ನು ಭಾರತ, ದಕ್ಷಿಣ ಆಫ್ರಿಕಾ ಸೇರಿದಂತೆ ಇತರ ದೇಶಗಳಲ್ಲೂ ಗುರುತಿಸಲಾಗಿದ್ದು, ಇವರಿಗೆ ಹಲವಾರು ಪ್ರಶಸ್ತಿಗಳು ಲಭಿಸಿವೆ. ಇವರ ಕಾರ್ಯಕ್ಕೆ ಭಾರತೀಯ ಜವಳಿ ಸಚಿವಾಲಯದಿಂದ ರಾಷ್ಟ್ರೀಯ ಪ್ರಶಸ್ತಿ ಕೂಡ ಲಭಿಸಿದೆ. ಸೈಯದ್ ಐಜಾಜ್ ಅವರು ತಮ್ಮ ಕಲೆಯನ್ನು ಬಿಟ್ಟು ಆಟೋ ರಿಕ್ಷಾವನ್ನು ಏಕೆ ಓಡಿಸಬೇಕಾಯಿತು ಎಂಬ ಬಗ್ಗೆ ಹಂಚಿಕೊಂಡಿದ್ದಾರೆ. ಐದರಿಂದ 10 ವರ್ಷಗಳ ನಂತರ ಈ ಕಲೆ ನಶಿಸಿ ಹೋಗಬಹುದು ಅಂತಾ ಐಜಾಜ್ ಬೇಸರ ವ್ಯಕ್ತಪಡಿಸಿದ್ದಾರೆ.

ಎಲ್ಲಾ ಕಷ್ಟಗಳ ಹೊರತಾಗಿಯೂ, ಐಜಾಜ್ ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ತನ್ನ ಕಲೆಗೆಂದೇ ಯಾವಾಗಲೂ ಸಮಯವನ್ನು ಮೀಸಲಿರಿಸುತ್ತಾರೆ. ತನ್ನ ಆಟೋ ರಿಕ್ಷಾ ಚಾಲನೆಯಲ್ಲಿ ತನ್ನ ದಿನವನ್ನು ಕಳೆದ ನಂತರ, ಅವರು ತನ್ನ ಕಲೆ ಮತ್ತು ಸೃಜನಶೀಲತೆಯ ಜಗತ್ತಿಗೆ ಹಿಂದಿರುಗುತ್ತಾರೆ. ಮೇರುಕೃತಿಗಳು ಈ ಕಲಾವಿದ ತನ್ನ ಕೈಚಳಕದಲ್ಲಿ ತಯಾರಿಸಿದ್ದಾರೆ.

ಐಜಾಜ್ ಕೇವಲ ಕುಶಲಕರ್ಮಿ ಅಲ್ಲ, ಅವರು ಕಲೆಯ ಹೋರಾಟಗಾರ ಎಂದು ಟ್ವಿಟ್ಟರ್ ಬಳಕೆದಾರರು ಬಿರುದು ನೀಡಿದ್ದಾರೆ. ಮನ್ನಣೆ ಮತ್ತು ಪ್ರಶಸ್ತಿಗಳು ಎಷ್ಟೇ ದೊರೆತರೂ ಕಲಾವಿದರು ಆರ್ಥಿಕವಾಗಿ ಎಷ್ಟು ಸಂಕಷ್ಟದಲ್ಲಿರುತ್ತಾರೆ ಎಂಬುದಕ್ಕೆ ಐಜಾಜ್ ಸಾಕ್ಷಿಯಾಗಿದ್ದಾರೆ.

— Khawar Khan Achakzai (@khawar_achakzai) April 19, 2023

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...