ಕಾರು ಈಗ ಮೂಲಭೂತ ಅಗತ್ಯಗಳಲ್ಲಿ ಒಂದಾಗಿದೆ. ಹೊಸ ಕಾರು ಖರೀದಿ ಸಾಧ್ಯವಿಲ್ಲ ಎನ್ನುವವರು ಸೆಕೆಂಡ್ ಹ್ಯಾಂಡ್ ಕಾರು ಖರೀದಿಸಲು ಮುಂದಾಗ್ತಾರೆ. ಸೆಕೆಂಡ್ ಹ್ಯಾಂಡ್ ಕಾರು ಖರೀದಿಸುವ ವೇಳೆ ಜನರು ಹೆಚ್ಚು ಓಡಿದ ಹಾಗೂ ಅಪಘಾತಕ್ಕೊಳಗಾದ ಕಾರನ್ನು ಖರೀದಿಸುವುದಿಲ್ಲ. ಆದ್ರೆ ಇವೆರಡು ಸಂಗತಿ ಮಾತ್ರವಲ್ಲ, ಸೆಕೆಂಡ್ ಹ್ಯಾಂಡ್ ಕಾರು ಖರೀದಿ ವೇಳೆ ಇನ್ನೂ ಅನೇಕ ವಿಷ್ಯಗಳನ್ನು ಗಮನಿಸಬೇಕಾಗುತ್ತದೆ.
ಸೆಕೆಂಡ್ ಹ್ಯಾಂಡ್ ಕಾರು ಖರೀದಿ ವೇಳೆಯೂ ಅದ್ರ ರೇಟಿಂಗ್ ಗೆ ಮಹತ್ವ ನೀಡಿ. ಝೀರೋ ಸೆಫ್ಟಿ ರೇಟಿಂಗ್ ಹೊಂದಿರುವ ಕಾರನ್ನು ಖರೀದಿಸಬೇಡಿ. ಝೀರೋ ಸೆಫ್ಟಿ ರೇಟಿಂಗ್ ಕಾರಿ ಅಂದ್ರೆ ಅದಲ್ಲಿ ಏರ್ ಬ್ಯಾಗ್ ಇರುವುದಿಲ್ಲ. ಬಜೆಟ್ ಕಡಿಮೆಯಿದೆ ಎನ್ನುವ ಕಾರಣಕ್ಕೆ ಖರೀದಿಸಲು ಹೋಗಬೇಡಿ. ಝೀರೋ ರೇಟಿಂಗ್ ಕಾರು ಅಪಾಯಕಾರಿ.
ವಿಡಿಯೋ ನೋಡಿ ಯಾವುದೇ ಕಾರನ್ನು ಖರೀದಿಸಬೇಡಿ. ಇತ್ತೀಚಿನ ದಿನಗಳಲ್ಲಿ ಬಹುತೇಕ ವಿಡಿಯೋಗಳಿಗೆ ಹಣ ನೀಡಲಾಗುತ್ತದೆ. ಹಾಗಾಗಿ ವಿಡಿಯೋದಲ್ಲಿ ತೋರಿಸಿದ ಎಲ್ಲ ವಿಷ್ಯಗಳು ಸತ್ಯವೆಂದು ನಂಬಲು ಸಾಧ್ಯವಿಲ್ಲ. ಕಾರು ಖರೀದಿಸುವ ಮೊದಲು ಟೆಸ್ಟ್ ಡ್ರೈವ್ ಮಾಡಿ. ತರಾತುರಿಯಲ್ಲಿ ಕಾರು ಖರೀದಿಸಿ ನಂತ್ರ ರಿಪೇರಿಗೆ ಹಣ ತೆತ್ತುವ ಬದಲು ಮೊದಲೇ ಸರಿಯಾಗಿ ಪರಿಶೀಲಿಸಿ ಖರೀದಿ ಮಾಡಿ.
ಕಾರ್ ಖರೀದಿಸುವ ಮೊದಲು ಸರ್ವೀಸ್ ಹಿಸ್ಟ್ರಿ ಪಡೆಯಿರಿ. ಕಾರು ಸರಿಯಾದ ಸಮಯಕ್ಕೆ ಸರ್ವಿಸ್ ಆಗಿದೆಯಾ ಎಂಬ ನಿಮ್ಮ ಪ್ರಶ್ನೆಗೆ ಇದ್ರಲ್ಲಿ ಉತ್ತರ ಸಿಗಲಿದೆ.