ನಿಮ್ಮ ಕಿಡ್ನಿಯಲ್ಲಿ ಸ್ಟೋನ್ ಆಗಿದೆಯೇ, ಇದೇ ಕಾರಣಕ್ಕೆ ನಿಮಗೆ ವಿಪರೀತ ಹೊಟ್ಟೆ ನೋವು ಕಾಣಿಸಕೊಳ್ಳುತ್ತಿದೆಯೇ? ಹಾಗಿದ್ದರೆ ಈ ವಸ್ತುಗಳಿಂದ ದೂರವಿರುವುದು ಒಳ್ಳೆಯದು.
ಪಾಲಕ್ ಸೊಪ್ಪನ್ನು ನಿತ್ಯ ಬಳಸುವುದು ಖಂಡಿತಾ ಒಳ್ಳೆಯದಲ್ಲ. ಇದರಿಂದ ನಿಮ್ಮ ನೋವು ಉಲ್ಬಣಗೊಳ್ಳಬಹುದು. ಹಾಗಾಗಿ ವಾರಕ್ಕೊಮ್ಮೆ ಮಾತ್ರ ಪಾಲಕ್ ಸೊಪ್ಪು ಸೇವಿಸಿ.
ಟೊಮೆಟೊ ಹಣ್ಣನ್ನು ಸಂಪೂರ್ಣವಾಗಿ ದೂರವಿಡಲು ಸಾಧ್ಯವಿಲ್ಲ. ಹಾಗಾಗಿ ಟೊಮೆಟೊದ ಬೀಜ ಪ್ರತ್ಯೇಕಿಸಿ ಸೇವಿಸಿ. ಚಾಕೊಲೇಟ್ ಸೇವನೆಯೂ ಒಳ್ಳೆಯದಲ್ಲ. ಇದರ ಬದಲು ಇತರ ಸಿಹಿತಿಂಡಿಗಳನ್ನು ತಿನ್ನಿ.
ಬೆಳಗೆದ್ದಾಕ್ಷಣ ಚಹಾ ಕುಡಿಯುತ್ತೀರಾ, ಹಾಗಿದ್ದರೆ ಇಂದಿನಿಂದಲೇ ಈ ಹವ್ಯಾಸ ಬಿಟ್ಟುಬಿಡಿ. ಮೂತ್ರ ಪಿಂಡದಲ್ಲಿ ಕಲ್ಲು ಇರುವವರು ವಿವಿಧ ಸಮಸ್ಯೆಗಳಿಂದ ಬಚಾವಾಗಬೇಕಿದ್ದರೆ ಚಹಾ ಸೇವನೆಯನ್ನು ಕಡಿಮೆ ಮಾಡಬೇಕು.
ನೀವು ಮಾಂಸಾಹಾರಿಗಳಾಗಿದ್ದರೆ ಸೀ ಫುಡ್ ನಿಂದ ಸಂಪೂರ್ಣವಾಗಿ ದೂರವಿರಿ. ಉಪ್ಪಿನ ಸೇವನೆಯನ್ನೂ ನಿಯಂತ್ರಣದಲ್ಲಿ ಇಟ್ಟುಕೊಳ್ಳಿ. ಪೇರಳೆ, ದ್ವಿದಳ ಧಾನ್ಯಗಳು, ಬೀಟ್ ರೂಟ್ ಮತ್ತು ಗೆಣಸಿನಿಂದ ದೂರವಿದ್ದಷ್ಟು ಒಳ್ಳೆಯದು.