alex Certify ಮೊದಲ ಬಾರಿಗೆ ಭಾರತೀಯ ತಿಂಡಿ ತಿನ್ನಲು ಪ್ರಯತ್ನಿಸಿದ ಆಸ್ಟ್ರೇಲಿಯಾ ಮಹಿಳೆ…! ವಿಡಿಯೋ ವೈರಲ್​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೊದಲ ಬಾರಿಗೆ ಭಾರತೀಯ ತಿಂಡಿ ತಿನ್ನಲು ಪ್ರಯತ್ನಿಸಿದ ಆಸ್ಟ್ರೇಲಿಯಾ ಮಹಿಳೆ…! ವಿಡಿಯೋ ವೈರಲ್​

ಭಾರತೀಯ ಆಹಾರವು ಪ್ರಪಂಚದಾದ್ಯಂತ ವೈವಿಧ್ಯತೆಗೆ ಹೆಸರುವಾಸಿ. ದೇಶದೊಳಗಿನ ವಿವಿಧತೆಗೆ ಅನುಗುಣವಾಗಿ ತಿನಿಸುಗಳೂ ವಿಭಿನ್ನ. ಜನಸಂಖ್ಯೆಯ ಪ್ರಮುಖ ಭಾಗವು ದೇಸಿ ಭಕ್ಷ್ಯಗಳನ್ನು ಸವಿಯಲು ಇಷ್ಟಪಡುತ್ತದೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿರುವ ಕ್ಲಿಪ್​ನಲ್ಲಿ, ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಮೊದಲ ಬಾರಿಗೆ ಭಾರತೀಯ ತಿಂಡಿಗಳನ್ನು ತಿನ್ನಲು ಪ್ರಯತ್ನಿಸಿದ್ದಾರೆ. ಆಕೆ ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡಿದ್ದು, ನೆಟ್ಟಿಗರಿಗೆ ಅಚ್ಚರಿ ಉಂಟುಮಾಡಿದೆ.

ವಿಡಿಯೋವನ್ನು ತನ್ನರ್​ ಎಂಬ ಕಂಟೆಂಟ್​ ಕ್ರಿಯೇಟರ್​ ಫೇಸ್​ಬುಕ್​ನಲ್ಲಿ ಹಂಚಿಕೊಂಡಿದ್ದು, ಆಕೆ ಭಕರವಾಡಿಯನ್ನು ತಿನ್ನಲು ಪ್ರಯತ್ನಿಸುವುದರೊಂದಿಗೆ ಕ್ಲಿಪ್​ ಪ್ರಾರಂಭವಾಗುತ್ತದೆ. ಅದನ್ನು ಸ್ವಲ್ಪ ದಾಲ್ಚಿನ್ನಿ ರೋಲ್​ ಎಂದು ಕರೆದಳು. ನಂತರ ನಟ್ಕ್ರಾಕರ್​ ಎಂಬ ಕುರುಕಲು ತಿನ್ನಲು ಮುಂದಾದಳು.

ಕುರ್ಕುರೆ, ಅಂಕಲ್​ ಚಿಪ್ಸ್​ ಮತ್ತು ಇತರ ದೇಸಿ ತಿಂಡಿಗಳನ್ನು ಸಹ ಪ್ರಯತ್ನಿಸಿದ್ದು, ಸೋನ್​ ಪಾಪ್ಡಿಯನ್ನು ಇಷ್ಟಪಟ್ಟಳು. 6 ನಿಮಿಷಗಳ ವಿಡಿಯೊದಲ್ಲಿ ಉಪ್ಪಿನಕಾಯಿ ರುಚಿಯನ್ನೂ ಪ್ರಯತ್ನಿಸಿದ್ದಾಳೆ.

ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ನಂತರ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ವೈರಲ್ ಕ್ಲಿಪ್​ ನೆಟ್ಟಿಗರಿಂದ ಪ್ರತಿಕ್ರಿಯೆಗಳ ರಾಶಿಯನ್ನೇ ಪಡೆಯಿತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...