ಭಾರತೀಯ ಆಹಾರವು ಪ್ರಪಂಚದಾದ್ಯಂತ ವೈವಿಧ್ಯತೆಗೆ ಹೆಸರುವಾಸಿ. ದೇಶದೊಳಗಿನ ವಿವಿಧತೆಗೆ ಅನುಗುಣವಾಗಿ ತಿನಿಸುಗಳೂ ವಿಭಿನ್ನ. ಜನಸಂಖ್ಯೆಯ ಪ್ರಮುಖ ಭಾಗವು ದೇಸಿ ಭಕ್ಷ್ಯಗಳನ್ನು ಸವಿಯಲು ಇಷ್ಟಪಡುತ್ತದೆ.
ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ಕ್ಲಿಪ್ನಲ್ಲಿ, ಆಸ್ಟ್ರೇಲಿಯಾದ ಮಹಿಳೆಯೊಬ್ಬರು ಮೊದಲ ಬಾರಿಗೆ ಭಾರತೀಯ ತಿಂಡಿಗಳನ್ನು ತಿನ್ನಲು ಪ್ರಯತ್ನಿಸಿದ್ದಾರೆ. ಆಕೆ ಪ್ರತಿಯೊಂದಕ್ಕೂ ಪ್ರತಿಕ್ರಿಯೆ ನೀಡಿದ್ದು, ನೆಟ್ಟಿಗರಿಗೆ ಅಚ್ಚರಿ ಉಂಟುಮಾಡಿದೆ.
ವಿಡಿಯೋವನ್ನು ತನ್ನರ್ ಎಂಬ ಕಂಟೆಂಟ್ ಕ್ರಿಯೇಟರ್ ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದು, ಆಕೆ ಭಕರವಾಡಿಯನ್ನು ತಿನ್ನಲು ಪ್ರಯತ್ನಿಸುವುದರೊಂದಿಗೆ ಕ್ಲಿಪ್ ಪ್ರಾರಂಭವಾಗುತ್ತದೆ. ಅದನ್ನು ಸ್ವಲ್ಪ ದಾಲ್ಚಿನ್ನಿ ರೋಲ್ ಎಂದು ಕರೆದಳು. ನಂತರ ನಟ್ಕ್ರಾಕರ್ ಎಂಬ ಕುರುಕಲು ತಿನ್ನಲು ಮುಂದಾದಳು.
ಕುರ್ಕುರೆ, ಅಂಕಲ್ ಚಿಪ್ಸ್ ಮತ್ತು ಇತರ ದೇಸಿ ತಿಂಡಿಗಳನ್ನು ಸಹ ಪ್ರಯತ್ನಿಸಿದ್ದು, ಸೋನ್ ಪಾಪ್ಡಿಯನ್ನು ಇಷ್ಟಪಟ್ಟಳು. 6 ನಿಮಿಷಗಳ ವಿಡಿಯೊದಲ್ಲಿ ಉಪ್ಪಿನಕಾಯಿ ರುಚಿಯನ್ನೂ ಪ್ರಯತ್ನಿಸಿದ್ದಾಳೆ.
ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ನಂತರ 5 ಲಕ್ಷಕ್ಕೂ ಹೆಚ್ಚು ವೀಕ್ಷಣೆಯಾಗಿದೆ. ವೈರಲ್ ಕ್ಲಿಪ್ ನೆಟ್ಟಿಗರಿಂದ ಪ್ರತಿಕ್ರಿಯೆಗಳ ರಾಶಿಯನ್ನೇ ಪಡೆಯಿತು.